ಪುತ್ತೂರಿನಲ್ಲಿ ಕಂಪೌಂಡರ್ ಆಗಿ ನಗುಮುಖದ ಸೇವೆಯನ್ನು ಕೊಡುತ್ತಾ ಎಲ್ಲರಿಗೂ ಚಿರಪರಿಚಿತರಾಗಿದ್ದ ಹಾರಾಡಿ ನಿವಾಸಿ ನರಸಿಂಹ ಭಟ್ (82.ವ )ಫೆ. 03 ರಂದು ರಾತ್ರಿ ನಿದಾನರಾಗಿದ್ದಾರೆ.
ಪುತ್ತೂರಿನ ಪ್ರಸಿದ್ಧ ಡಾಕ್ಟರಾಗಿ ಸೇವೆ ಸಲ್ಲಿಸುತ್ತಿದ್ದ ದಿ l. ಶಿವರಾಮ್ ಭಟ್ ಇವರ ಕ್ಲಿನಿಕ್ ಒಂದರಲ್ಲಿ ಕಂಪೌಂಡರ್ ಆಗಿ ಸುದೀರ್ಘ 68ವ. ಸೇವೆ ಸಲ್ಲಿಸಿದ್ದರು.ತದನಂತರ ಸೇವೆಯಿಂದ ನಿವೃತ್ತಿಗೊಂಡಿದ್ದರು.
ಅವರು ತನ್ನ ಸೇವಾ ಅವಧಿಯಲ್ಲಿ ತಮ್ಮ ಕ್ಲಿನಿಕ್ ಗೆ ಬಂದವರನ್ನು ತನ್ನ ಒಂದು ವಿಶೇಷ ನಗುವಿನಿಂದಲೇ ಆಹ್ವಾನಿಸಿ, ಮದ್ದು ನೀಡಿ ಧೈರ್ಯ ತುಂಬುತ್ತಿದ್ದರು
ಇವರ ಈ ನಗುವಿನಿಂದ ಪುತ್ತೂರಿನಾದ್ಯಂತ ಜನರು ಇವರನ್ನು ” ತೆಳಿಕೆದ ಬೊಳ್ಳಿ ” ಕಂಪೌಂಡರ್ ಎಂದೇ ಹೇಳುತ್ತಿದ್ದರು.
ಮೃತರು ಪತ್ನಿ ಕಾವೇರಮ್ಮ, ಪುತ್ರ ಕಾರ್ತಿಕ್ ಮತ್ತು ಇಬ್ಬರು ಸಹೋದರನ ಅಗಲಿದ್ದಾರೆ