ಪುತ್ತೂರು: ಕಾಡಾನೆ ದಾಳಿಗೆ ಮಹಿಳೆ ಬಲಿಯಾದ ಘಟನೆ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯ ಕಣಿಯಾರು ಮಲೆ ಅರ್ತಿಯಡ್ಕ ಸಿಆರ್ ಸಿ ಕಾಲನಿಯಿಂದ ವರದಿಯಾಗಿದೆ.
ರಬ್ಬರ್ ಟ್ಯಾಪಿಂಗ್ ಗೆ ತೆರಳಿದ ಅರ್ತಿಯಡ್ಕದ ಮಹಿಳೆಯೋರ್ವರ ಮೇಲೆ ಎ.29 ರಂದು ಮುಂಜಾನೆ ಆನೆ ದಾಳಿ ನಡೆಸಿದೆ. ಆನೆ ದಾಳಿಗೆ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಕಾಡಾನೆ ದಾಳಿಯಿಂದ ವೃದ್ಧೆಯೊಬ್ಬರು ಸಾವನ್ನಪ್ಪಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮಕ್ಕೆ ಸೇರಿದ ಕಣಿಯಾರು ರಬ್ಬರ್ ತೋಟದಲ್ಲಿ ನಡೆದಿದೆ. ಪುತ್ತೂರು ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಕಾಡಾನೆಗೆ ಸಿಲುಕಿ ಸಾವು ಸಂಭವಿಸಿದ್ದು,ಈ ಬೆಳವಣಿಗೆ ಅರಣ್ಯದಂಚಿನಲ್ಲಿರುವ ಕೆಲಸ ನಿರ್ವಹಿಸುವ ಜನರನ್ನು ಪ್ರಾಣಭಯದಲ್ಲಿ ಬದುಕುವಂತೆ ಮಾಡಿದೆ. ಘಟನೆಯ ಬಳಿಕ ರಬ್ಬರ್ ಪ್ಲಾಂಟೇಶನ್ ನಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು ತಮಗೆ ರಕ್ಷಣೆಯನ್ನು ನೀಡಬೇಕೆಂದು ಅರಣ್ಯ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಎಪ್ರಿಲ್ 29 ರ ಬೆಳಿಗ್ಗೆ 7.30 ಸುಮಾರಿಗೆ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಡಿಯಲ್ಲಿ ಬರುವ ಕಣಿಯಾರು ರಬ್ಬರ್ ತೋಟದಲ್ಲಿ ಚೆಲ್ಲಮ್ಮ ಎನ್ನುವ ಸುಮಾರು 65 ವರ್ಷ ಪ್ರಾಯದ ವೃದ್ಧೆ ರಬ್ಬರ್ ಮರಗಳಿಂದ ರಬ್ಬರ್ ಹಾಲು ಸಂಗ್ರಹಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ರಬ್ಬರ್ ಮರದ ಬಳಿ ನಿಂತು ರಬ್ಬರ್ ಹಾಲು ತೆಗೆಯಿತ್ತಿದ್ದ ವೃದ್ಧೆಯ ಮುಂದು ಬಂದು ನಿಂತ ಕಾಡಾನೆ ಆಕೆಯ ಮೇಲೆ ದಾಳಿ ಮಾಡಿದೆ. ಸೆಲ್ಲಮ್ಮ ಬೆನ್ನಿನ ಬಾಗಕ್ಕೆ ಆನೆ ತುಳಿದಿರುವ ಕಾರಣಕ್ಕೆ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸೆಲ್ಲಮ್ಮ ರಬ್ಬರ್ ಟ್ಯಾಪಿಂಕ್ ಕೆಲಸಗಾರರೊಬ್ಬರ ಬದಲಿಗೆ ರಬ್ಬರ್ ಹಾಲು ತೆಗೆಯಲು ಬಂದಿದ್ದು , ಆನೆ ಆಕೆಯ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ. ಆನೆ ದಾಳಿಯಿಂದ ಭಯಭೀತಗೊಂಡ ಕಾರ್ಮಿಕರು ತಮ್ಮ ಕೆಲಸವನ್ನು ಸ್ಥಗಿತಗೊಳಿಸಿ ಪ್ಲಾಂಟೇಶನ್ ಬಿಟ್ಟು ಓಡಿದ್ದಾರೆ. ವೃದ್ಧೆಯಾಗಿರುವ ಕಾರಣಕ್ಕೆ ಸೆಲ್ಲಮ್ಮರಿಗೆ ಆನೆ ದಾಳಿಯಿಂದ ತಪ್ಪಿಸಲಾಗದೆ ಸಾವನ್ನಪ್ಪಿದ್ದಾರೆ. ಸಾವಿಗೀಡಾದ ಮಹಿಳೆ ಕುಟುಂಬಕ್ಕೆ ಪರಿಹಾರ ಮತ್ತು ಆಕೆಯ ಮಗನಿಗೆ ಉದ್ಯೋಗ ನೀಡಬೇಕೆಂದು ಆಗ್ರಹಿಸಿ ಟ್ಯಾಪಿಂಗ್ ಕಾರ್ಮಿಕರು ಶವವನ್ನು ಘಟನೆ ನಡೆದ ಸ್ಥಳದಲ್ಲಲೇ ಇಟ್ಟು ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಉತ್ತರಕ್ಕಾಗಿ ಕಾದಿದ್ದಾರೆ. ಬೆಳಿಗ್ಗೆ 8 ಗಂಟೆಯಿಂದ ಶವವನ್ನು ಘಟನೆ ನಡೆದ ಸ್ಥಳದಲ್ಲೇ ಇಟ್ಡು, ಪುತ್ತೂರು ಶಾಸಕರು ಸುಮಾರು 1.30 ತನಕ ಬರುವ ತನಕ ಕಾದು,ಬಳಿಕ ಬಳಿಕ ಶವದ ಅಂತಿಮ ವಿಧಿವಿಧಾನಗಳಿಗೆ ವ್ಯವಸ್ಥೆ ಮಾಡಲಾಗಿದೆ. ಕಳೆದ ಒಂದು ವರ್ಷದಿಂದ ಆನೆಗಳ ಹಿಂಡು ಈ ಭಾಗದಲ್ಲಿ ಓಡಾಡುತ್ತಿರುವ ಬಗ್ಗೆ ಸ್ಥಳೀಯರು ಅಂದಿನ ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಆದರೆ ಸರಿಯಾದ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಈ ಘಟನೆ ನಡೆಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತ ಕುಟುಂಬಕ್ಕೆ ಪರಿಹಾರ,ಸೆಲ್ಲಮ್ಮ ಕುಟುಂಬದ ಒಬ್ಬ ಸದಸ್ಯನಿಗೆ ಕೆಲಸ ನೀಡಬೇಕೆಂದು ಸರಕಾರವನ್ನು ಒತ್ತಾಯಿಸಲಾಗಿದೆ.
ಮುಂಜಾನೆ 6 ಗಂಟೆಗೆ ತಮ್ಮ ಮನೆಯಿಂದ ಸುಮಾರು 2 ಕಿಲೋಮೀಟರ್ ದೂರದ ರಬ್ಬರ್ ತೋಟಕ್ಕೆ ಕಾಡಿನ ಹಾದಿಯಲ್ಲಿ ನಡೆದು ಬರದು ಕಾರ್ಮಿಕರು ಇದೀಗ ಆನೆಯ ದಾಳಿಯ ಬಳಿಕ ತಮ್ಮ ಕೆಲಸ ನಿರ್ವಹಿಸಲೂ ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಿರಿಯ ಅರಣ್ಯ ಅಧಿಕಾರಿಗಳ ನಿರ್ದೇಶನದಂತೆ ಮುಂದಿನ ಒಂದು ವಾರದ ಕಾಲ ಘಟನೆ ನಡೆದ ರಬ್ಬರ್ ತೋಟದಲ್ಲಿ ರಬ್ಬರ್ ಟ್ಯಾಪಿಂಗ್ ನಿಲ್ಲಿಸಲಾಗಿದೆ. ಕಾರ್ಮಿಕರು ರಬ್ಬರ್ ತೋಟಕ್ಕೆ ಬೆಉವ ಮೊದಲು ಅರಣ್ಯ ಸಿಬ್ಬಂದಿಗಳ ತಂಡ ತೋಟದ ವೀಕ್ಷಣೆ ನಡೆಸಿದ ಬಳಿಕವೇ ಕಾರ್ಮಿಕರು ಕೆಲಸ ನಿರ್ವಹಿಸುವುದು. ರಬ್ಬರ್ ಹಾಲು ಸಾಗಿಸಲು ವಾಹನದ ವ್ಯವಸ್ಥೆಯನ್ನು ಕಲ್ಪಿಸಲು ಪುತ್ತೂರು ಶಾಸಕ ಮತ್ತು ಅಧಿಕಾರಿಗಳಿಗೆ ಸ್ಥಳೀಯರು ಮನವಿ ಸಲ್ಲಿಸಿದ್ದಾರೆ. ಸ್ವತಹ ಶಾಸಕರು ಕೂಡಾ ಅಧಿಕಾರಿಗಳಿಗೆ ಈ ಬಗ್ಗೆ ಕ್ರಮ ವಹಿಸುವಂತೆ ಸೂಚಿಸಿದ್ದಾರೆ.
ಅರಣ್ಯದಂಚಿನಲ್ಲಿರುವ ಪೆರ್ಲಂಪಾಡಿ ಪ್ರದೇಶದಲ್ಲಿ ಜನವಸತಿ ಪ್ರದೇಶಗಳೂ ಹೆಚ್ಚಾಗಿದ್ದು, ಆನೆಯ ದಾಳಿ ಘಟನೆ ನಡೆದ ಬಳಿಕ ಈ ಭಾಗದಲ್ಲಿ ಇದೀಗ ಭಯದ ವಾತಾವರಣ ನಿರ್ಮಾಣಗೊಂಡಿದೆ.