ಬೆಂಗಳೂರು: ಹಾಸನ ಅಶ್ಲೀಲ ವಿಡಿಯೋ ಪ್ರಕರಣ ಕಳೆದೆರಡು ದಿನಗಳಲ್ಲಿ ಹೊಸ ತಿರುವು ಪಡೆದುಕೊಳ್ಳುತ್ತಿರುವ ಸೂಚನೆಗಳು ಲಭ್ಯವಾಗಿದೆ. ಈ ವಿಡಿಯೋ ಪ್ರಕರಣವನ್ನು ವ್ಯವಸ್ಥಿತವಾಗಿ ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ.ಇದರಲ್ಲಿ ಸಂತ್ರಸ್ಥೆಯರಿಗೆ ರಕ್ಷಣೆ ನೀಡುವ ಕಾಳಜಿ ಕಾಣಿಸುತ್ತಿಲ್ಲ ಎಂದು ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ಕಮಾರಸ್ವಾಮಿ, ವಿಡಿಯೋ ಲೀಕ್ ಮಾಡಿದ ಆರೋಪ ಹೊತ್ತಿರುವ ನವೀನ್ ಗೌಡ ಸ್ನೇಹತರ ಜೊತೆ ಮಾತನಾಡಿರುವ ಆಡಿಯೋವನ್ನು ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದಾರೆ. ಒಂದು ನಿಮಿಷದ ಈ ಆಡಿಯೋವನ್ನು ಸುದ್ದಿಗೋಷ್ಠಿಯಲ್ಲಿ ಹೆಚ್‌ಡಿಕೆ ಪ್ಲೇ ಮಾಡಿದ್ದಾರೆ.
ವಿಡಿಯೋ ಹರಿಬಿಡುವವರು, ಲೀಕ್ ಮಾಡಿದವರ ವಿರುದ್ದ ಎಸ್ಐಟಿ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದೆ. ಆದರೆ ಈಗಾಗಲೇ ವಿಡಿಯೋ ಹರಿಬಿಟ್ಟವರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ? ವಿಡಿಯೋ ಲೀಕ್ ಆಗಿ ಹಲವು ದಿನಗಳಾಗಿದೆ. ಹೆಚ್‌ಡಿ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್ ಪ್ರಕಾರ, ತಾನು ದೇವರಾಜೇಗೌಡರಿಗೆ ಮಾತ್ರ ವಿಡಿಯೋ ಕೊಟ್ಟಿದ್ದು ಎಂದಿದ್ದಾನೆ. ಇಲ್ಲೀತನಕ ಹೊರ ಬಂದಿರುವ ವಿಡಿಯೋ ಕುರಿತು ಮಾತನಾಡುತ್ತಿಲ್ಲ. ಆತ ಮಲೇಷಿಯಾ ಹೋಗಿದ್ದಾನೆ ಅನ್ನೋ ಗುಮಾನಿ ಇದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಏಪ್ರಿಲ್ 30ರಂದು ವಿಡಿಯೋಗಳನ್ನು ಕಾರ್ತಿಕ್ ಮಾಧ್ಯಮಗಳಿಗೆ ಕೊಟ್ಟಿದ್ದ. ಈತನೇ ಪೆನ್‌ಡ್ರೈವ್ ಸೂತ್ರಧಾರಿ, ಈಗ ಅತ ಎಲ್ಲಿದ್ದಾನೆ. ತನಿಖೆ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಮೇಲೆ ಮಾತ್ರ ನಡೆಯುತ್ತಿದೆ ಎಂದು ಹೆಚ್‌ಡಿಕೆ ಆರೋಪಿಸಿದ್ದಾರೆ. ಹಾಸನದ ಚುನಾವಣಾ ಪ್ರಚಾರದಲ್ಲಿ ನವೀನ್ ಗೌಡ ಹಾಸನದ ಅಭ್ಯರ್ಥಿ ಜೊತೆ ಇರುವ ಫೋಟೋ ತೋರಿಸಿದ ಕುಮಾರಸ್ವಾಮಿ, ಘಟನೆ ಹಿಂದಿನ ಷಡ್ಯಂತ್ರಕ್ಕೆ ಇವು ಪುರಾವೆ ಎಂದಿದ್ದಾರೆ.