ಪುತ್ತೂರು : ಪುತ್ತೂರಿನ ಇತಿಹಾಸದಲ್ಲಿ ಪ್ರಪ್ರಥಮಬಾರಿಗೆ ಗಿರಿಜಾ ಕಲ್ಯಾಣೋತ್ಸವಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು ಶ್ರೀ ಮಹಾಲಿಂಗೇಶ್ವರನ ಅಪ್ಪಣೆಗಾಗಿ ಮಹಾಲಿಂಗೇಶ್ವರನಲ್ಲಿ ಫಲಪುಷ್ಪವನ್ನಿಟ್ಟು ಪ್ರಾರ್ಥನೆ ನೆರವೇರಿಸಲಾಯಿತು. ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮೂಲಕ ಕಳೆದ ಮೂರು ವರ್ಷ ಲಕ್ಷಾಂತರ ಭಕ್ತರನ್ನು ಜೋಡಿಸಿ ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನಗೊಂಡಿದ್ದು ಈ ಭಾರಿ ಮಹಾಲಿಂಗೇಶ್ವರನ ಪ್ರೀತ್ಯರ್ಥವಾಗಿ ಗಿರಿಜಾ ಕಲ್ಯಾಣೋತ್ಸವವನ್ನು ನಡೆಸಲು ತೀರ್ಮಾನಿಸಿದ್ದು ಡಿಸೆಂಬರ್ ತಿಂಗಳಲ್ಲಿ ದೇವಾಲಯದ ದೇವರುಮಾರು ಗದ್ದೆಯಲ್ಲಿ ನಡೆಯಲಿದ್ದು ಐತಿಹಾಸಿಕ ಕ್ಷಣಕ್ಕೆ ಭಕ್ತರು ಸಾಕ್ಷಿಯಾಗಲಿದ್ದಾರೆ. ಈ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ 27ರ ಆದಿತ್ಯವಾರ ಹಿಂದೂ ಬಂಧುಗಳ ಸಭೆ ನಡೆದು ಗಿರಿಜಾ ಕಲ್ಯಾಣೋತ್ಸವ ಸಮಿತಿ ರೂಪುಗೊಳ್ಳಲಿದೆ. ಈ ಎರಡು ದಿವಸಗಳ ನಡೆದ ಪ್ರಾರ್ಥನೆಯ ಸಂದರ್ಭದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
























