ಮಂಗಳೂರು: ತಡೆಗೆ ಶ್ರೀರಾಮಸೇನೆ ಸಂಘಟನೆ ಮುಂದಾಗಿದ್ದು, ರಾಜ್ಯದ 6 ಕಡೆಗಳಲ್ಲಿ ಮಂಗಳೂರು, ಬೆಂಗಳೂರು, ಹುಬ್ಬಳ್ಳಿ, ಬಾಗಲಕೋಟೆ, ಕಲಬುರಗಿ ಹಾಗೂ ದಾವಣಗೆರೆಯಲ್ಲಿ ಸಹಾಯವಾಣಿ ಆರಂಭ ಮಾಡಲು ನಿರ್ಧರಿಸಿದೆ. ಜೊತೆಗೆ ಸಹಾಯವಾಣಿಗೆ ಕರೆ ಮಾಡಿದವರ ಹೆಸರು ಕೂಡ ಗೌಪ್ಯವಾಗಿರಿಸಲು ಸಂಘಟನೆ ತೀರ್ಮಾನ ಮಾಡಿದೆ. ಲವ್ ಜಿಹಾದ್ ಜಾಲದಲ್ಲಿ ಸಿಕ್ಕಿ ಬೀಳುವ ಯುವತಿಯರನ್ನು ಈ ಜಾಲದಿಂದ ಹೊರತರಲು ಈ ಹೊಸ ಪ್ರಯತ್ನ ಮಾಡಲಾಗಿದೆ. ಯಾರು ಈ ಸಹಾಯ ಪಡೆಯಲು ಕರೆ ಮಾಡುತ್ತಾರೋ ಅಂತಹವರಿಗೆ ಆಯಾ ಜಿಲ್ಲೆಗಳಲ್ಲಿಯೇ ವಕೀಲರು, ಕೌನ್ಸೆಲಿಂಗ್ ತಜ್ಞರು ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಗಳಿರುವ ತಂಡ ಕಾರ್ಯ ನಿರ್ವಹಣೆ ಮಾಡುತ್ತದೆ. ಕಾನೂನು ಬದ್ದವಾಗಿ, ಸುವ್ಯವಸ್ಥಿತವಾಗಿ ಮಾಡಲು ಈ ಯೋಜನೆ ರೂಪಿಸಲಾಗಿದೆ.
ಕಂಕನಾಡಿ ಬಳಿ ರಸ್ತೆಯಲ್ಲೇ ನಮಾಜ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಕಿಡಿಕಾರಿದೆ. ಜೊತೆಗೆ ರಸ್ತೆ, ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ತಡೆಯುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡುತ್ತೇವೆ ಎಂದು ವಿ.ಎಚ್.ಪಿ ಮುಖಂಡ ಪ್ರದೀಪ್ ಸರಿಪಲ್ಲ ಹೇಳಿದ್ದಾರೆ. ‘ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡಲು ಈ ರೀತಿಯ ಕೃತ್ಯ ಎಸುಗುತ್ತಿದ್ದಾರೆ. ಮಸೀದಿ ಒಳಗೆ ಸಾಕಷ್ಟು ಜಾಗ ಇದ್ದರೂ ಕೂಡ ಸಾರ್ವಜನಿಕರಿಗೆ ತೊಂದರೆ ಕೊಡಲು ರಸ್ತೆಯಲ್ಲಿ ನಮಾಜ್ ಮಾಡಲಾಗಿದೆ.
ಚುನಾವಣೆ ವೇಳೆ ರಸ್ತೆಯಲ್ಲಿ ಇಫ್ತಾರ್ ಕೂಟ ಮಾಡಿದ್ದಾಗ ಕೂಡ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಅದರ ಮುಂದುವರೆದ ಭಾಗವಾಗಿ ಈಗ ರಸ್ತೆಯಲ್ಲಿ ನಮಾಜ್ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ. ಈ ಮೂಲಕ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಿಲ್ಲ ಅಂದರೆ ಮುಂದಿನ ದಿನಗಳಲ್ಲಿ ಅಲ್ಲಿ ಸಾಮೂಹಿಕ ಹನುಮಾನ್ ಚಾಲೀಸ್ ಪಠಣ ಮಾಡಲಾಗುವುದು. ಈ ಬಗ್ಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಮನವಿ ಮಾಡಲಿದ್ದೇವೆ ಎಂದರು.