ಉಡುಪಿ:-ರಘಪತಿ ಭಟ್ ಬಂಡಾಯ ಸ್ಪರ್ಧೆ, ಭಟ್ ಪರ ಮತಯಾಚನೆ ನಡೆಸಿದ ಜಿಲ್ಲಾ ಬಿಜೆಪಿ ನಾಯಕರಿಗೆ ನೋಟಿಸ್.
ಜೂನ್ 3 ರಂದು ನಡೆಯುವ ವಿಧಾನಪರಿಷತ್ ಚುನಾವಣೆಯಲ್ಲಿ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಧನಂಜಯ ಸರ್ಜಿ ವಿರುದ್ಧವಾಗಿ ಬಂಡಾಯ ಅಭ್ಯರ್ಥಿಯಾಗಿ ಉಡುಪಿ ಮಾಜಿ ಶಾಸಕ ರಘಪತಿ ಭಟ್ ಸ್ಪರ್ಧಿಸಿದ್ದು ಭರ್ಜರಿ ಮತಯಾಚನೆ ನಡೆಸುತ್ತಿದ್ದು ಇದಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಪ್ರಮುಖರು ಸಾಥ್ ನೀಡುತ್ತಿರುವುದು ಕಂಡು ಬಂದಿದೆ.
ಕಳೆದ ವಾರ ರಾಜ್ಯ ಬಿಜೆಪಿ ರಘಪತಿ ಭಟ್ ಅವರನ್ನು ಪಕ್ಷದಿಂದ ಉಚ್ಚಾಟನೆ ನಡೆಸಿದ್ದು ಈ ಬೆನ್ನಲ್ಲೇ ಉಡುಪಿ ಜಿಲ್ಲಾ ಬಿಜೆಪಿ ರಘಪತಿ ಭಟ್ ಜೊತೆ ಗುರುತಿಸಿಕೊಂಡು ಬಂಡಾಯ ಅಭ್ಯರ್ಥಿ ಪರ ಮತಯಾಚನೆ ನಡೆಸುತ್ತಿರುವ ನಾಲ್ವರು ಉನ್ನತ ಜವಾಬ್ದಾರಿ ಪ್ರಮುಖರಾದ ಶ್ರೀ ಮಹೇಶ್ ಠಾಕೂರ್,ಶ್ರೀ ಉಪೇಂದ್ರ ನಾಯಕ್, ಶ್ರೀ ರೋಶನ್ ಶೆಟ್ಟಿ, ಜುನೈದ್ ಇವರುಗಳಿಗೆ ನೋಟಿಸ್ ಜಾರಿ ಮಾಡಿದೆ.
ನೋಟಿಸ್ ನಲ್ಲಿ ಪಕ್ಷದಲ್ಲಿ ಜವಾಬ್ದಾರಿ ಇರುವ ತಾವು ಪಕ್ಷೇತರ ಅಭ್ಯರ್ಥಿ ಪರ ಮತಯಾಚನೆ ನಡೆಸುತ್ತಿರುವುದು ಪಕ್ಷ ವಿರೋಧಿ ಚಟುವಟಿಕೆಯಾಗಿದೆ.ಪತ್ರ ತಲುಪಿದ ಎರಡು ದಿನಗಳ ಒಳಗೆ ಸ್ಪಷ್ಟೀಕರಣ ನೀಡುವಂತೆ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ ಕಿಶೋರ್ ಕುಮಾರ್ ನೋಟಿಸ್ ನೀಡಿದ್ದಾರೆ.