ರಾಮಕುಂಜ: ರಾಮಕುಂಜ ಅಮೈ ಎಂಬಲ್ಲಿ ಗೋ ಮಾಂಸ ಪತ್ತೆ
ಕಡಬ ತಾಲೂಕಿನ ರಾಮಕುಂಜ ಆತೂರು ಸಮೀಪದ ಅಮೈ ಎಂಬಲ್ಲಿ ಗೋ ಮಾಂಸ ಪತ್ತೆಯಾದ ಬಗ್ಗೆ ವರದಿಯಾಗಿದೆ. ಆಟೋ ರಿಕ್ಷಾದಲ್ಲಿ ಸುಮಾರು 50 ಕೆಜಿ ಗೋ ಮಾಂಸ ಸಾಗುಸುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಕಡಬ ಪೋಲಿಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿಯುವಲ್ಲಿ ಸಫಲರಾಗಿದ್ದಾರೆ.
ಅಬ್ದುಲ್ ಎಂಬಾತನನ್ನು ಬಂಧಿಸಿ ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಾಗಿದೆ.
ಕಡಬ ಎಸ್ ಐ ಅಭಿನಂದನ್ ಎಂ ಎಸ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ ಎಂದು ತಿಳಿದು ಬಂದಿದೆ.
ಹೆಚ್ಚಿನ ಮಾಹಿತಿ ಇನ್ನೂ ತಿಳಿಯಬೇಕಾಗಿದೆ