ಪುತ್ತೂರು ಬಿಜೆಪಿಗೆ ನೂತನ ಸಮಿತಿ ಆಯ್ಕೆಗೆ ಮೀನ ಮೇಷ ಎಣಿಸುತ್ತಿದ್ದ ಜಿಲ್ಲಾ ಬಿಜೆಪಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದ್ದರು ಅಧಿಕಾರ ಅಸ್ತಂತರವಾಗದೇ ಎರಡು ವಾರ ಕಳೆದರೂ ನಿನ್ನೆ ಒಟ್ಟಾರೆ ಪದಾಧಿಕಾರಿಗಳ ಗೊಂದಲದ ಜೊತೆ ಕೆಳವರ ಅನುಪಸ್ಥಿತಿಯಲ್ಲಿ ಪ್ರತಿಭಟನೆಯನ್ನು ಮಾಡಿದ ನಂತರ ಜಿಲ್ಲಾ ಬಿಜೆಪಿಯ ಸೂಚನೆಯಂತೆ ಈ ದಿನ ಅಧಿಕಾರ ಹಸ್ತಂತಾರವಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದಿದೆ.
ಸರಳ ಕಾರ್ಯಕ್ರಮದಲ್ಲಿ ಎರಡೂ ಮಂಡಲದ ಅಧ್ಯಕ್ಷರುಗಳಾದ ಗ್ರಾಮಾಂತರದಿಂದ ಸಾಜ ರಾಧಾಕೃಷ್ಣ ಆಳ್ವ ಮತ್ತು ನಗರದಿಂದ ಪಿ.ಜಿ ಜಗನ್ನೀವಾಸ ರಾವ್ ರವರು ನೂತನ ಅಧ್ಯಕ್ಷರುಗಳಾದ ದಯಾನಂದ ಶೆಟ್ಟಿ ಉಜಿರೆಮಾರ್ ಮತ್ತು ಶಿವಕುಮಾರ್ ಕಲ್ಲಿಮಾರ್ ರವರಿಗೆ ಬಿಜೆಪಿ ಶಾಲು ಹಾಕಿ ಕಛೇರಿಯ ದಾಖಲೆ ಪುಸ್ತಕ ಹಸ್ತಾಂತರಿಸಿ ನೂತನ ಸಮಿತಿಗೆ ಶುಭ ಹಾರೈಸಿದರು.
ಗ್ರಾಮಾಂತರ ಮಂಡಲದ ನೂತನ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಕೋಡಿಬೈಲು, ಪ್ರಶಾಂತ್ ನೆಕ್ಕಿಲಾಡಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ತೆಂಕಿಲ, ನಾಗೇಶ್ ಪ್ರಭು ಜೊತೆಗಿದ್ದರು.
ಸರಳ ಕಾರ್ಯಕ್ರಮದ ಸಂದರ್ಭದಲ್ಲಿ ರಾಜ್ಯ ಒಬಿಸಿ ಕಾರ್ಯದರ್ಶಿ ಆರ್ ಸಿ ನಾರಾಯಣ್, ಜಿಲ್ಲಾ ಉಪಾಧ್ಯಕ್ಷರಾದ ಪ್ರಸನ್ನ ಮಾರ್ತ, ಕಾರ್ಯದರ್ಶಿ ವಿದ್ಯಾ ಗೌರಿ, ನೂತನ ಉಪಾಧ್ಯಕ್ಷರುಗಳಾದ ಹರಿಪ್ರಸಾದ್ ಯಾದವ್, ಸುನೀಲ್ ದಡ್ಢು, ಯತೀಂದ್ರ ಕೊಚ್ಚಿ, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ಜಿಲ್ಲಾ ಬಿಜೆಪಿ ರಾಧಾಕೃಷ್ಣ ಬೂಡಿಯಾರ್, ಚನಿಲ ತಿಮ್ಮಪ್ಪ ಶೆಟ್ಟಿ, ಅರುಣ್ ಪುತ್ತಿಲ, ಜೀವಂಧರ್ ಜೈನ್, ಅಪ್ಪಯ ಮಣಿಯಾಣಿ, ಸಂತೋಷ್ ರೈ ಕೈಕಾರ, ರಾಜೇಶ್ ಬನ್ನೂರು, ಹರೀಶ್ ಮರುವಾಳ. ಮೊದಲಾದವರು ಉಪಸ್ಥಿತರಿದ್ದರು.