ಪುತ್ತೂರು – ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಏಕತಡ್ಕ ಶಾಲೆಯಲ್ಲಿ ಈ ವರ್ಷದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಅಭಿವ್ಯಕ್ತ -24 ನಡೆಯಿತು.
ಕ್ಲಸ್ಟರ್ ಮಟ್ಟದಲ್ಲಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ, ತಾಲೋಕು ಮಟ್ಟ, ಜಿಲ್ಲಾ ಮಟ್ಟದಲ್ಲಿ ಗುರುತಿಸುವ ಹಾಗೆ ಮಾಡುವ ಮೊದಲ ಹೆಜ್ಜೆ ಇದಾಗಿದ್ದು, ಕ್ಲಸ್ಟರ್ ಗೆ ಸೇರಿದ ಅನೇಕ ಶಾಲಾ ಮಕ್ಕಳು, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು, ಊರವರು, ಹಳೆ ವಿದ್ಯಾರ್ಥಿಗಳ ಮತ್ತು ಶಾಲಾ ಆಡಳಿತ ಮಂಡಳಿ ಒಟ್ಟು ಸೇರುವಿಕೆಯಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಅದೇಶದಂತೆ ಈ ಕಾರ್ಯಕ್ರಮ ಆಯೋಜನೆ ಮಾಡಲಾಯಿತು.
ಬಲ್ನಾಡು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಪ್ರತಿನಿಧಿ ವಿನಯ್, ಸದಸ್ಯರಾದ ಜಗದೀಶ್, ಹರಿಪ್ರಸಾದ್, ವಿನೋದ್, ಸುಗಂಧಿ, ಯಶೋಧ, ವೀಣಾ ಬೆಳಗ್ಗೆ ಯಿಂದ ಸಂಜೆಯವರೆಗೂ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿ ಎಲ್ಲಾರ ಮೆಚ್ಚುಗೆಗೆ ಪಾತ್ರರಾದರು.
ಶಾಲಾ ಆಡಳಿತ ಮಂಡಳಿ ವತಿಯಿಂದ ಸಿಹಿ ಊಟದ ವ್ಯವಸ್ಥೆ ಮಾಡಲಾಯಿತು. ಶಾಲಾ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಎಲ್ಲಾರಿಗೂ ಶಾಲಾ ಮುಖ್ಯಉಪಾಧ್ಯರಾದ ಶ್ರೀ ಮತಿ ಚಿತ್ರ ಟೀಚರ್ ವಂದಿಸಿದರು.