• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಸಾವಿರ ವರ್ಷಗಳ ಇತಿಹಾಸವಿರುವ ಮದಗ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಜೀರ್ಣೋದ್ಧಾರದ ಅಂಗವಾಗಿ ನೂತನ ಧ್ವಜಸ್ಥಂಭದ ತೈಲಾಧಿವಾಸ ಕಾರ್ಯಕ್ರಮ – ಹಾರಕರೆ ವೆಂಕಟ್ರಮಣ ಭಟ್

November 27, 2026
ಸಂವಿಧಾನದ ಆಶಯಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಿ – ಡಾ. ನಾರ್ಬರ್ಟ್ ಮಸ್ಕರೇನ್ಹಸ್

ಪುತ್ತೂರು: ಅತ್ಯಾಧುನಿಕ ಶೈಲಿಯ ದ್ವಾರಕಾ ಕಮರ್ಶಿಯಲ್ಸ್ ಕಟ್ಟಡ ಅದ್ದೂರಿ ಲೋಕಾರ್ಪಣೆ

ತಿರುಮಲ ತಿಮ್ಮಪ್ಪನಿಗೆ 121 ಕೆಜಿ ಚಿನ್ನದ ಆಭರಣ ಕಾಣಿಕೆ- ಭಕ್ತ ದಂಪತಿಯಿಂದ ಐತಿಹಾಸಿಕ ಕೊಡುಗೆ

ಪುತ್ತೂರು: ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ನಡೆಯಲಿರುವ ಪಂಚಮುಖಿ ಆಂಜನೇಯ ಹವನಕ್ಕೆ ಹವನದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ

ಪುತ್ತೂರು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ 59ನೇ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಸಮಾರೋಪ ಸಮಾರಂಭ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ತುಳು ಅಧಿಕೃತ ಭಾಷೆ! ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ತುಳುನಲ್ಲೇ ವ್ಯವಹಾರ ಅನುಮೋದನೆಗೆ ಸರಕಾರದ ಆದೇಶ

ಕರ್ನಾಟಕ ದೇಶದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯ – ಅತ್ಯಂತ ಕಡಿಮೆ ಪಾಲು ಸಿಗುತ್ತಿದೆ ಕೇಂದ್ರದ ವಿರುದ್ಧ ಕಾಂಗ್ರೆಸ್ ನಾಯಕರ ಆಕ್ರೋಶ

ಉತ್ತರ ಪ್ರದೇಶ ಪ್ರತಿಪಕ್ಷ ಎಸ್ ಪಿ ತನ್ನ ಪ್ರಣಾಳಿಕೆ ಬಿಡುಗಡೆ – 5000 ಸೇರಿ ಹಲವು ಬಂಪರ್ ಭರವಸೆ!

ಸುಳ್ಯ ಯುವವಾಹಿನಿ ಘಟಕದ ಅಧ್ಯಕ್ಷರಾಗಿ ನೂತನ ಪ್ರವೀಣ್‌ ನೆಟ್ಟಾರ್ ಆಯ್ಕೆ

ಕೇಂದ್ರ ಸರಕಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ವಳಾಲಿನಲ್ಲಿ ಟೋಲ್ ಗೇಟ್ ಕಾರ್ಯಾರಂಭಕ್ಕೆ ಸಿದ್ಧ – ಇನ್ನು ವಾಹನ ಸವಾರರಿಗೆ ಹೆದ್ದಾರಿಯಲ್ಲಿ ಟೋಲ್ ಜನಸಾಮಾನ್ಯರಿಗೆ ಹೊರೆ

November 26, 2026
ಪುತ್ತೂರು ವಿಧಾನಸಭಾ ಕ್ಷೇತ್ರ 11 ಕಡೆ ವಿವಿಧ ಸೇತುವೆ ನಿರ್ಮಾಣಕ್ಕೆ 9.90 ಕೋಟಿ ಅನುದಾನ ಬಿಡುಗಡೆ : ಶಾಸಕ ಅಶೋಕ್ ರೈ

ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ 24 ಗಂಟೆಗಳ ಹ್ಯಾಕಥಾನ್ ಸ್ಪರ್ಧೆ

November 25, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Friday, November 27, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಸಂವಿಧಾನದ ಆಶಯಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಿ – ಡಾ. ನಾರ್ಬರ್ಟ್ ಮಸ್ಕರೇನ್ಹಸ್

    ಸಂವಿಧಾನದ ಆಶಯಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಿ – ಡಾ. ನಾರ್ಬರ್ಟ್ ಮಸ್ಕರೇನ್ಹಸ್

    ಪುತ್ತೂರು: ಅತ್ಯಾಧುನಿಕ ಶೈಲಿಯ ದ್ವಾರಕಾ ಕಮರ್ಶಿಯಲ್ಸ್ ಕಟ್ಟಡ ಅದ್ದೂರಿ ಲೋಕಾರ್ಪಣೆ

    ಪುತ್ತೂರು: ಅತ್ಯಾಧುನಿಕ ಶೈಲಿಯ ದ್ವಾರಕಾ ಕಮರ್ಶಿಯಲ್ಸ್ ಕಟ್ಟಡ ಅದ್ದೂರಿ ಲೋಕಾರ್ಪಣೆ

    ಪುತ್ತೂರು: ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ನಡೆಯಲಿರುವ ಪಂಚಮುಖಿ ಆಂಜನೇಯ ಹವನಕ್ಕೆ ಹವನದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ

    ಪುತ್ತೂರು: ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ನಡೆಯಲಿರುವ ಪಂಚಮುಖಿ ಆಂಜನೇಯ ಹವನಕ್ಕೆ ಹವನದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ

    ಪುತ್ತೂರು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ 59ನೇ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಸಮಾರೋಪ ಸಮಾರಂಭ

    ಪುತ್ತೂರು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ 59ನೇ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಸಮಾರೋಪ ಸಮಾರಂಭ

    ಸಾವಿರ ವರ್ಷಗಳ ಇತಿಹಾಸವಿರುವ ಮದಗ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಜೀರ್ಣೋದ್ಧಾರದ ಅಂಗವಾಗಿ ನೂತನ ಧ್ವಜಸ್ಥಂಭದ ತೈಲಾಧಿವಾಸ ಕಾರ್ಯಕ್ರಮ – ಹಾರಕರೆ ವೆಂಕಟ್ರಮಣ ಭಟ್

    ಸಾವಿರ ವರ್ಷಗಳ ಇತಿಹಾಸವಿರುವ ಮದಗ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಜೀರ್ಣೋದ್ಧಾರದ ಅಂಗವಾಗಿ ನೂತನ ಧ್ವಜಸ್ಥಂಭದ ತೈಲಾಧಿವಾಸ ಕಾರ್ಯಕ್ರಮ – ಹಾರಕರೆ ವೆಂಕಟ್ರಮಣ ಭಟ್

    ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ತುಳು ಅಧಿಕೃತ ಭಾಷೆ! ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ತುಳುನಲ್ಲೇ ವ್ಯವಹಾರ ಅನುಮೋದನೆಗೆ ಸರಕಾರದ ಆದೇಶ

    ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ತುಳು ಅಧಿಕೃತ ಭಾಷೆ! ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ತುಳುನಲ್ಲೇ ವ್ಯವಹಾರ ಅನುಮೋದನೆಗೆ ಸರಕಾರದ ಆದೇಶ

    ಸುಳ್ಯ ಯುವವಾಹಿನಿ ಘಟಕದ ಅಧ್ಯಕ್ಷರಾಗಿ ನೂತನ ಪ್ರವೀಣ್‌ ನೆಟ್ಟಾರ್ ಆಯ್ಕೆ

    ಸುಳ್ಯ ಯುವವಾಹಿನಿ ಘಟಕದ ಅಧ್ಯಕ್ಷರಾಗಿ ನೂತನ ಪ್ರವೀಣ್‌ ನೆಟ್ಟಾರ್ ಆಯ್ಕೆ

    ಕೇಂದ್ರ ಸರಕಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ವಳಾಲಿನಲ್ಲಿ ಟೋಲ್ ಗೇಟ್ ಕಾರ್ಯಾರಂಭಕ್ಕೆ ಸಿದ್ಧ – ಇನ್ನು ವಾಹನ ಸವಾರರಿಗೆ ಹೆದ್ದಾರಿಯಲ್ಲಿ ಟೋಲ್ ಜನಸಾಮಾನ್ಯರಿಗೆ ಹೊರೆ

    ಕೇಂದ್ರ ಸರಕಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ವಳಾಲಿನಲ್ಲಿ ಟೋಲ್ ಗೇಟ್ ಕಾರ್ಯಾರಂಭಕ್ಕೆ ಸಿದ್ಧ – ಇನ್ನು ವಾಹನ ಸವಾರರಿಗೆ ಹೆದ್ದಾರಿಯಲ್ಲಿ ಟೋಲ್ ಜನಸಾಮಾನ್ಯರಿಗೆ ಹೊರೆ

    ಪುತ್ತೂರು ವಿಧಾನಸಭಾ ಕ್ಷೇತ್ರ 11 ಕಡೆ ವಿವಿಧ ಸೇತುವೆ ನಿರ್ಮಾಣಕ್ಕೆ 9.90 ಕೋಟಿ ಅನುದಾನ ಬಿಡುಗಡೆ : ಶಾಸಕ ಅಶೋಕ್ ರೈ

    ಪುತ್ತೂರು ವಿಧಾನಸಭಾ ಕ್ಷೇತ್ರ 11 ಕಡೆ ವಿವಿಧ ಸೇತುವೆ ನಿರ್ಮಾಣಕ್ಕೆ 9.90 ಕೋಟಿ ಅನುದಾನ ಬಿಡುಗಡೆ : ಶಾಸಕ ಅಶೋಕ್ ರೈ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಧಾರ್ಮಿಕ

ಸಾವಿರ ವರ್ಷಗಳ ಇತಿಹಾಸವಿರುವ ಮದಗ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಜೀರ್ಣೋದ್ಧಾರದ ಅಂಗವಾಗಿ ನೂತನ ಧ್ವಜಸ್ಥಂಭದ ತೈಲಾಧಿವಾಸ ಕಾರ್ಯಕ್ರಮ – ಹಾರಕರೆ ವೆಂಕಟ್ರಮಣ ಭಟ್

by ಪ್ರಜಾಧ್ವನಿ ನ್ಯೂಸ್
November 27, 2026
in ಧಾರ್ಮಿಕ, ಪುತ್ತೂರು, ಪ್ರಾದೇಶಿಕ
0
ಸಾವಿರ ವರ್ಷಗಳ ಇತಿಹಾಸವಿರುವ ಮದಗ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಜೀರ್ಣೋದ್ಧಾರದ ಅಂಗವಾಗಿ ನೂತನ ಧ್ವಜಸ್ಥಂಭದ ತೈಲಾಧಿವಾಸ ಕಾರ್ಯಕ್ರಮ – ಹಾರಕರೆ ವೆಂಕಟ್ರಮಣ ಭಟ್
6
SHARES
17
VIEWS
ShareShareShare

ಪುತ್ತೂರು: ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸವಿರುವ, ಮಾಗಣೆ ದೇವಸ್ಥಾನವಾಗಿರುವ ಪಡ್ನರು ಗ್ರಾಮದ ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಜೀರ್ಣೋದ್ಧಾರದ ಅಂಗವಾಗಿ ನೂತನ ಧ್ವಜಸ್ಥಂಭದ ತೈಲಾಧಿವಾಸ ಕಾರ್ಯಕ್ರಮಗಳು ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾರಕರೆ ವೆಂಕಟ್ರಮಣ ಭಟ್ ಮತ್ತು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನಕ್ಕೆ ಆವಶ್ಯಕವಾದ ಸುಮಾರು ರೂ.25 ಲಕ್ಷ ಮೌಲ್ಯದ ಮರವನ್ನು ಭಕ್ತರೋರ್ವರು ದೇಣಿಗೆ ನೀಡಿದ್ದಾರೆ. ಉಳಿದಂತೆ ರೂ.15ಲಕ್ಷ ವೆಚ್ಚದ ಮರ ಖರೀದಿಸಲಾಗಿದೆ. ವಾಸ್ತು ಶಿಲ್ಪಿ ಮಹೇಶ್ ಪ್ರಸಾದ್ ಮುನಿಯಂಗಳ ಅವರ ಮಾರ್ಗದರ್ಶನದಲ್ಲಿ ಹರೀಶ್ ಆಚಾರ್ಯ ಮೂಡಬಿದರೆ ಧ್ವಜಸ್ಥಂಭದ ಕೆತ್ತನೆಯ ಕೆಲಸಗಳು ಪೂರ್ಣಗೊಂಡಿದೆ. ಪದ್ಮನಾಭ ಪಿಲಿಗೂಡು ಅವರ ನೇತೃತ್ವದಲ್ಲಿ ಶಿಲೆ ಕಲ್ಲಿನ ಕೆಲಸಗಳು ನಡೆಯಲಿದೆ. ನೂತನ ಧ್ವಜಸ್ಥಂಭದ ತೈಲಾಧಿವಾಸ ಕಾರ್ಯಕ್ರಮಗಳು ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ತೈಲಾಧಿವಾಸಕ್ಕೆ ಸುಮಾರು ಒಂದು ಸಾವಿರ ಲೀಟ‌ರ್ ಎಳ್ಳೆಣ್ಣೆಯ ಆವಶ್ಯಕತೆಯಿದ್ದು ಭಕ್ತರು ಸಹಕರಿಸುವಂತೆ ಅವರು ಮನವಿ ಮಾಡಿದರು. ಶ್ರೀಕ್ಷೇತ್ರವು 1994ರಲ್ಲಿ ಜೀರ್ಣೋದ್ಧಾರಗೊಂಡಿತ್ತು. ಆನಂತರ 2013ರಲ್ಲಿ ನೂತನ ಸುತ್ತುಪೌಲಿ, ನಿರ್ಮಿಸಿ ಅದ್ಧೂರಿ ಬ್ರಹ್ಮಕಲಶ ನೆರವೇರಿತ್ತು. ನಂತರದ ದಿನಗಳಲ್ಲಿ ನಿರ್ವಹಣೆಯ ಕಷ್ಟವನ್ನರಿತು ಹಿರಿಯರ ಸಲಹೆಯಂತೆ ಮೂರು ಹೊತ್ತಿನ ಜಾತ್ರೋತ್ಸವಗಳು ನಡೆಯುತ್ತಾ ಬಂದಿರುತ್ತದೆ. ಈಗಿನ ಗರ್ಭಗುಡಿಯ ಕಾಂಕ್ರೀಟ್ ಗುಡಿಯಾಗಿದ್ದು ಅದರಲ್ಲಿ ನ್ಯೂನ್ಯತೆಯಿರುವುದಾಗಿ ದೇವಸ್ಥಾನದಲ್ಲಿ ನಡೆದ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿದೆ. ಹೀಗಾಗಿ ನೂತನ ತಾಮ್ರದ ಹೊದಿಕೆಯ ಗರ್ಭಗುಡಿ ನಮಸ್ಕಾರ ಮಂಟಪ, ಮಹಾಬಲಿ ಪೀಠ, ಧ್ವಜಸ್ಥಂಭ, ದೇವರ ಅವಭ್ರತ ಕೆರೆ ದುರಸ್ಥಿ, ರಥದ ಮಂದಿರ, ಪಾಕಶಾಲೆ ನಿರ್ಮಾಣಗೊಳ್ಳಬೇಕಿದೆ.

ಜೀರ್ಣೋದ್ಧಾರಕ್ಕೆ ಪೂರಕವಾಗಿ ನಾಗನ ಕಟ್ಟೆ, ಪಂಜುರ್ಲಿ ದೈವ ಗುಡಿಯು ಈಗಾಗಲೇ ನಿರ್ಮಾಣಗೊಂಡು ಪ್ರತಿಷ್ಠಾ ಕಾರ್ಯಗಳು ನೆರವೇರಿರುತ್ತದೆ.

ದೇವಸ್ಥಾನದ ಅರ್ಚಕರ ಮನೆ ಶಿಥಿಲಾವಸ್ಥೆಯಲ್ಲಿದ್ದು ಹೊಸ ಮನೆ ನಿರ್ಮಾಣಕ್ಕೆ ಶಾಸಕರು ರೂ.13ಲಕ್ಷ ಅನುದಾನ ನೀಡಿರುತ್ತಾರೆ. ಅಲ್ಲದೆ ಜೀರ್ಣೋದ್ದಾರ ಕಾರ್ಯಗಳಿಗೆ ಶಾಸಕರು ರೂ.10ಲಕ್ಷ ಹಾಗೂ ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯೆ ಮಲ್ಲಿಕ ಪಕಳ ರೂ.5ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಕರ್ನಾಟಕ ಬ್ಯಾಂಕ್‌ನ ಸಿಎಸ್‌ಆ‌ರ್ ನಿಧಿಯಿಂದ ರೂ.10ಈಗಾಗಲೇ ಮಂಜೂರುಗೊಂಡಿದೆ. ಅಲ್ಲದೆ ದೇವರ ಅವಭ್ರತ ಕೆರೆಯು ರೂ.25ಲಕ್ಷದಲ್ಲಿ ದುರಸ್ತಿಯಾಗಿದೆ. ಜೊತೆಗೆ ರಥದ ಮಂದಿರ, ಪಾಕಶಾಲೆ ನಿರ್ಮಾಣಗೊಳ್ಳಬೇಕಿದೆ.

Rose Mac

ಜಾಹೀರಾತು

ಅರ್ಚಕರ ಮನೆ ಶಿಥಿಲಾವಸ್ಥೆಯಲ್ಲಿ ಹೊಸ ಮನೆಗಕಟ್ಟಲು ರೂ.13ಲಕ್ಷ ಅನುದಾನ ನೀಡಿರುತ್ತಾರೆ. ಜೀರ್ಣೋದ್ಧಾರ ಕಾರ್ಯಗಳಿಗೆ ಶಾಸಕರು ರೂ. 10ಲಕ್ಷ ಮತ್ತು ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯೆ ಮಲ್ಲಿಕಾ ಪಕಳ ರೂ.5ಲಕ್ಷ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಅಲ್ಲದೆ ಶೌಚಾಲಯ ನಿರ್ಮಾಣಕ್ಕೆ ಕರ್ನಾಟಕ ಬ್ಯಾಂಕ್‌ನಿಂದ ರೂ.10ಲಕ್ಷ ಅನುದಾನ ಮಂಜೂರಾಗಿರುವುದು ಸೇರಿದಂತೆ ಒಟ್ಟು ರೂ.65ಲಕ್ಷ ಅನುದಾನ ಬಂದಿರುತ್ತದೆ. ಗ್ರಾಮದಲ್ಲಿ ಸುಮಾರು 700 ಮನೆಯಿದ್ದು ಪ್ರತಿ ಮನೆಯಿಂದ ರೂ.30 ಸಾವಿರ ನೀಡುವಂತೆ ಮನವಿ ಮಾಡಲಾಗಿದೆ. ಸುಮಾರು 250 ಮನೆಯಿಂದ ಮೊದಲ ಕಂತಿನ ಮೊತ್ತ ಜಮೆಯಾಗಿರುತ್ತದೆ. ಪಡ್ನರು ಜನಾರ್ದನ ಯುವಕ ಮಂಡಲ, ಸರಸ್ವತಿ ಯುವತಿ ಮಂಡಲ, ವರಮಹಾಲಕ್ಷ್ಮೀ ಪೂಜಾ ಸಮಿತಿ, ಗಣೇಶೋತ್ಸವ ಸಮಿತಿ ಹಾಗೂ ಅನ್ನಪೂರ್ಣೇಶ್ವರಿ ಭಜನಾ ಮಂದಿರದವರು ಈಗಾಗಲೇ ದೊಡ್ಡ ಮೊತ್ತದ ದೇಣಿಗೆ ನೀಡಿ ಸಹಕರಿಸಿರುತ್ತಾರೆ. ಜೀರ್ಣೋದ್ಧಾರದ ಕಾರ್ಯಗಳಿಗೆ ಇನ್ನೂ ಸುಮಾರು 1.50ಕೋಟಿ ಮೊತ್ತದ ಆವಶ್ಯಕತೆಯಿದೆ. ಕ್ಷೇತ್ರದ ಪೂರ್ವದಲ್ಲಿ 5 ದಿನಗಳ ಜಾತ್ರೋತ್ಸವ ನಡೆಯುತ್ತಿತ್ತು ಎನ್ನುವುದು ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿದೆ.

ಜಾತ್ರೋತ್ಸವದ ನಿರ್ವಹಣೆಯ ಕಷ್ಟವನ್ನರಿತ ಹಿರಿಯರ ಸಲಹೆಯಂತೆ ಕಳೆದ ಹಲವು ವರ್ಷಗಳಿಂದ 3 ಹೊತ್ತಿನ ಜಾತ್ರೋತ್ಸವ ನೆರವೇರುತ್ತಿದೆ. ಧ್ವಜಸ್ಥಂಭವಿದ್ದರೂ ಧ್ವಜಾರೋಹಣ ನಡೆಯತ್ತಿರಲಿಲ್ಲ. ಇದರಿಂದ ದೋಷಗಳು ಕಂಡು ಬಂದಿದ್ದು ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಕ್ಷೇತ್ರ ಜೀರ್ಣೋದ್ದಾರಗೊಂಡು ಬ್ರಹ್ಮಕಲಶ ನೆರವೇರಿದ ಬಳಿಕ ಧ್ವಜಾರೋಹಣದೊಂದಿಗೆ 5 ದಿನಗಳ ಜಾತ್ರೋತ್ಸವ ನಡೆಯಲಿದೆ. ಈ ವರ್ಷದ ಜಾತ್ರೋತ್ಸವದಲ್ಲಿ ಈಗಿನ ಪದ್ದತಿಯಂತೆ 3 ಹೊತ್ತಿನ ಜಾತ್ರೋತ್ಸವ ನಡೆಯಲಿದೆ. ಇದು 3 ಹೊತ್ತಿನ ಕೊನೆಯ ಜಾತ್ರೆಯಾಗಲಿದೆ. ಇನ್ನೂ ಒಂದೂವರೆ ವರ್ಷಗಳಲ್ಲಿ ಜೀರ್ಣೋದ್ದಾರಗಳು ಪೂರ್ಣಗೊಂಡು ಬ್ರಹ್ಮಕಲಶದ ಬಳಿಕ ಧ್ವಜಾರೋಹಣದೊಂದಿಗೆ 5 ದಿನಗಳ ನಡೆಯುವ ಮೂಲಕ ಜಾತ್ರೋತ್ಸವದ ಪುರಾತನ ಇತಿಹಾಸ ಮತ್ತೆ ಮರುಕಳಿಸಲಿದೆ ಎಂದು ಹೇಳಿದರು.

ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಹಾರಕರೆ ವೆಂಕಟ್ರಮಣ ಭಟ್‌ ಅವರ ಅಧ್ಯಕ್ಷತೆಯಲ್ಲಿ ಕಳೆದ 24 ವರ್ಷಗಳಿಂದ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಾ ಬರುತ್ತಿದೆ. ಪ್ರತಿಯೊಂದು ಕೆಲಸ ಕಾರ್ಯಗಳನ್ನು ಪ್ರಶ್ನಾ ಚಿಂತನೆ ನಡೆಸಿ, ದೈವಜ್ಞರ ಮಾರ್ಗದರ್ಶನದಂತೆ ಭಕ್ತರ ಸಭೆ ನಡೆಸಿ ಮುಂದುವರಿಯುವ ಮೂಲಕ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿದೆ. ಇದಕ್ಕೆ ಭಕ್ತರ ಸಹಕಾರವೂ ದೊರತೆಯುತ್ತಿದೆ ಎಂದು ಹೇಳಿದರು.

ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಪೂವಪ್ಪ ದೇಂತಡ್ಕ, ಶ್ರೀಧರ ಕುಂಜಾರು ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯ ಮನೋಹರ ಆರುವಾರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LOTUS TRAVEL

ಜಾಹೀರಾತು

SendShare2Share
Previous Post

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ತುಳು ಅಧಿಕೃತ ಭಾಷೆ! ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ತುಳುನಲ್ಲೇ ವ್ಯವಹಾರ ಅನುಮೋದನೆಗೆ ಸರಕಾರದ ಆದೇಶ

Next Post

ಪುತ್ತೂರು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ 59ನೇ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಸಮಾರೋಪ ಸಮಾರಂಭ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ಪುತ್ತೂರು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ 59ನೇ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಸಮಾರೋಪ ಸಮಾರಂಭ

ಪುತ್ತೂರು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ 59ನೇ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಸಮಾರೋಪ ಸಮಾರಂಭ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In