ಪುತ್ತೂರು: ಪುತ್ತೂರಿನ ದ್ವಾರಕಾ ಕಾಪೆರ್Çರೇಶನ್ ಪ್ರೈ.ಲಿ. ಸಂಸ್ಥೆಯು ದರ್ಬೆ ಬೈಪಾಸ್ ಸರ್ಕಲ್ ಬಳಿ ನಿರ್ಮಿಸಿದ ಅತ್ಯಾಧುನಿಕ ಶೈಲಿಯ ದ್ವಾರಕಾ ಕಮರ್ಶಿಯಲ್ಸ್ ಕಟ್ಟಡವು ಶುಕ್ರವಾರ ಅದ್ದೂರಿ ಕಾರ್ಯಕ್ರಮಗಳೊಂದಿಗೆ ಲೋಕಾರ್ಪಣೆಗೊಂಡಿತು.
ಸಮಾರಂಭದಲ್ಲಿ ದ್ವಾರಕಾ ಕಮರ್ಷಿಯಲ್ಸ್ ಜತೆಗೆ ಕಟ್ಟಡದ ನೆಲ ಹಂತ ಹಾಗೂ ಮೊದಲ ಮಹಡಿಯಲ್ಲಿ ದಿನಸಿ ಸಾಮಾಗ್ರಿಗಳನ್ನು ಒಳಗೊಂಡ `ದ್ವಾರಕಾ ಮಂಗಲ್ ಹೈಪರ್ ಮಾರ್ಕೆಟ್’, 2ನೇ ಮಹಡಿಯಲ್ಲಿ `ವಾಣಿಜ್ಯ ಕೊಠಡಿಗಳು’, 3ನೇ ಮಹಡಿಯಲ್ಲಿ `ದ್ವಾರಕಾ ಸಮೂಹ ಸಂಸ್ಥೆಗಳ ಪ್ರಧಾನ ಕಚೇರಿ’, ಎಸ್ಕವೇಟರ್ ಅತಿಥಿ ಗಣ್ಯರಿಂದ ಉದ್ಘಾಟನೆಗೊಂಡಿತು.

ದ್ವಾರಕಾ ಪ್ರತಿಷ್ಠಾನದ ಅಧ್ಯಕ್ಷ ಹರಿಕೃಷ್ಣ ಭಟ್ಟ ಅತ್ರ್ಯಡ್ಕ ಅವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಅಕ್ಷರ ಸಂತ ಪದ್ಮಶ್ರೀ ಡಾ.ಹರೇಕಳ ಹಾಜಬ್ಬ ಮಾತನಾಡಿ, ಬಸ್ಸು ನಿಲ್ದಾಣದಲ್ಲಿ ಕಿತ್ತಳೆ ಮಾಡುತ್ತಿದ್ದ ಸಣ್ಣ ವ್ಯಾಪಾರಿಯಾಗಿದ್ದ ತಾನು ಎಲ್ಲರ ಸಹಕಾರದಿಂದ ರಾಷ್ಟ್ರಪತಿ, ಪ್ರಧಾನಮಂತ್ರಿ, ಮುಖ್ಯಮಂತ್ರಿಗಳ ಬಳಿ ತೆರಳಿ ಪ್ರಶಸ್ತಿಗಳನ್ನು ಸ್ವೀಕರಿಸಲು ಸಾಧ್ಯವಾಗಿದೆ. ಇದು ಸಮಾಜದ ಸಹಕಾರದಿಂದ ಸಾಧ್ಯವಾಗಿದೆ. ದ್ವಾರಕಾ ಸಂಸ್ಥೆಯೂ ಸಮಾಜಮುಖಿ ಕೆಲಸಗಳೊಂದಿಗೆ ಮುನ್ನಡೆಯುತ್ತಿರುವುದು ಖುಷಿಯ ವಿಚಾರ ಎಂದು ಸಂಸ್ಥೆಗೆ ಶುಭಹಾರೈಸಿದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮಾತನಾಡಿ, ದ್ವಾರಕಾ ಸಂಸ್ಥೆಯು ಉದ್ಯಮದ ಜತೆಗೆ ಸಾಮಾಜಿಕ ಸೇವೆ, ಸಂಸ್ಕøತಿ ಉಳಿಸುವ ಕಾರ್ಯವನ್ನೂ ಮಾಡುತ್ತಿದೆ. ಸಾಕಷ್ಟು ಕುಟುಂಬಗಳಿಗೆ ಸ್ವಾಭಿಮಾನದ ಜೀವನ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪುತ್ತೂರು ಸಂತ ಫಿಲೋಮಿನಾ ಕಾಲೇಜು ಪ್ರಾಂಶುಪಾಲ ಡಾ.ಆಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ, ಕಾಯಕವೇ ಕೈಲಾಸವಾದರೆ ಕಾಯಕದಲ್ಲಿ ಮುಖ್ಯವಾಗಿರುವುದು ವ್ಯಾಪಾರ. ಯಾವುದೇ ಉದ್ಯಮವು ಒಂದೇ ದಿನದಲ್ಲಿ ಯಶಸ್ಸು ಸಾಧಿಸುವುದು ಅಸಾಧ್ಯವಾಗಿದ್ದು, ಸಮಯಪಾಲನೆ, ಕಷ್ಟಪಡುವ ಪ್ರವೃತ್ತಿ ದೊಡ್ಡ ಸ್ಥಾನಕ್ಕೆ ಕೊಂಡೊಯುತ್ತದೆ ಎಂದರು.
ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ವ್ಯಕ್ತಿಯಲ್ಲಿ ಪರಿಶ್ರಮ ಇದ್ದಾಗ ಪ್ರಗತಿಯ ಉತ್ತುಂಗಕ್ಕೆ ಏರಲು ಸಾಧ್ಯ ಎಂಬುದಕ್ಕೆ ಗೋಪಾಲಕೃಷ್ಣ ಭಟ್ ಅವರು ಸಾಕ್ಷಿ. ತಾನು ಬೆಳೆಯುವ ಜತೆಗೆ ಸಮಾಜವೂ ಬೆಳೆಯಬೇಕು ಎನ್ನುವ ಮನಸ್ಥಿತಿಯ ಅವರಿಗೆ ನಾವು ಶಕ್ತಿ ತುಂಬಬೇಕು ಎಂದರು. ಈ ಸಂದರ್ಭದಲ್ಲಿ ಕಟ್ಟಡದ ನಿರ್ಮಾಣ ಕಾರ್ಯದಲ್ಲಿ ಶ್ರಮಿಸಿದವರನ್ನು ಗೌರವಿಸಲಾಯಿತು. ಸ್ವಚ್ಛತೆಯಿಂದ ಆರಂಭಗೊಂಡು ಪ್ರತಿ ನಿರ್ಮಾಣ ಕೆಲಸದಲ್ಲಿ ತೊಡಗಿಸಿಕೊಂಡ 30 ಕ್ಕೂ ಹೆಚ್ಚು ಮಂದಿಯನ್ನು ಗುರುತಿಸಿ ಗೌರವಿಸಿದ್ದು, ವಿಶೇಷವಾಗಿತ್ತು. ದ್ವಾರಕಾ ಪ್ರತಿಷ್ಠಾನದ ಕಾರ್ಯದರ್ಶಿ ಗಣರಾಜ್ ಕುಂಬ್ಳೆ ವಿವರ ನೀಡಿದರು.
ಇದೆ ಸಂದರ್ಭದಲ್ಲಿ ಸುಳ್ಯದ ಕೆ.ಆರ್.ಗೋಪಾಲಕೃಷ್ಣ ಮತ್ತು ಬಳಗದಿಂದ ಸಂಗೀತ ಸಾಂಗತ್ಯ ಸಮಾರಂಭ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ದ್ವಾರಕಾ ಪ್ರತಿಷ್ಠಾನದ ಅಧ್ಯಕ್ಷ ಹರಿಕೃಷ್ಣ ಭಟ್ಟ ಅತ್ರ್ಯಡ್ಕ,ದ್ವಾರಕಾ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಗೋಪಾಲಕೃಷ್ಣ ಭಟ್,ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಪುತ್ತೂರು ಮಾಸ್ಟರ್ ಪ್ಲಾನರಿಯ ಎಸ್.ಕೆ.ಆನಂದಕುಮಾರ್, ಹಿರಿಯ ಉದ್ಯಮಿ ಮಂಜುನಾಥ ನಾಯಕ್, ಐಶ್ವರ್ಯ ಕನ್ಟ್ರಕ್ಷನ್ಸ್ನ ರಘುರಾಮ ಭಟ್ಟ ಉಪ್ಪಂಗಳ, ಪುತ್ತೂರು ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಜಯಂತ ನಡುಬೈಲು, ಪುಡಾ ಅಧ್ಯಕ್ಷ ಅಮಳ ರಾಮಚಂದ್ರ, ಉದ್ಯಮಿ ಕರುಣಾಕರ ರೈ ದೇರ್ಲ,ಸಂಸ್ಥೆಯ ನಿರ್ದೇಶಕಿ ಅಶ್ವಿನಿ ಗೋಪಾಲಕೃಷ್ಣ, ಎಕ್ಸಿಕ್ಯೂಟಿವ್ ಡೈರೆಕ್ಟರ್ ಅಮೃತಕೃಷ್ಣ ಎನ್., ಅಮೃತ ಶ್ಯಾನುಭಾಗ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
























