ಪುತ್ತೂರು ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಉನ್ನತ ಶಾಲೆ ಕುಡಿಪಾಡಿಗೆ 2025 ಕ್ಕೆ ನೂರು ವರ್ಷ ಪೂರ್ತಿಯಾಗಲಿದ್ದು ಇದರ ಪೂರ್ವಭಾವಿ ಸಭೆ ಉದ್ಘಾಟನಾ ಕಾರ್ಯಕ್ರಮ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ವಲಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಗೆದ್ದು ತಾಲೂಕು ಮಟ್ಟಕ್ಕೆ ಆಯ್ಕೆಯಾದ ಬಾಲಕಿಯ ವಾಲಿಬಾಲ್ ತಂಡಕ್ಕೆ ಸಮವಸ್ತ್ರ ವಿತರಿಸಲಾಯಿತು.
ಶತಮಾನೋತ್ಸವ ಎಲ್ಲಾ ಕಾರ್ಯಕ್ರಮ ಮತ್ತು ಮುಂದಿನ ಯೋಜನೆಯ ಸಲುವಾಗಿ ಲೋಗೋ ಬಿಡುಗಡೆ ಮಾಡಲಾಯಿತು. ಬಹುದೊಡ್ಡ ಯೋಜನೆ ಸಭಾಂಗಣ ನಿರ್ಮಾಣ ಮತ್ತು ಇತರ ವಿಚಾರದ ಬಗ್ಗೆ ಪ್ರಭಾರ ಮುಖ್ಯಗುರುಗಳಾದ ಸ್ಟಾನಿ ಪ್ರವೀಣ್ ಮಸ್ಕರೇನಸ್ ಮಾತಾನಾಡಿ ಶತಮಾನೋತ್ಸವದ ಸಮಿತಿಯ ಗೌರವಧ್ಯಕ್ಷರಾಗಿ ಪುತ್ತೂರಿನ ಜನಪ್ರಿಯ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಅವರನ್ನು ಕೇಳಿಕೊಂಡಿದ್ದು ಅವರು ಒಪ್ಪಿಕೊಂಡಿದ್ದಾರೆ. ಅಲ್ಲದೇ ಪ್ರತ್ಯೇಕ ಮೂರು ಸಮಿತಿಗಳು ಮುಂದಿನ ದಿನಗಳಲ್ಲಿ ಕಾರ್ಯ ನಿರ್ವಹಿಸಲಿದೆ ನೂರು ವರ್ಷಗಳಲ್ಲಿ ಈ ಶಾಲೆಯಲ್ಲಿ ಕಲಿತಿರುವವರನ್ನು ಒಟ್ಟು ಸೇರಿಸುವುದೇ ಗುರಿಯಾಗಿದೆ ಎಂದರು.
ಶಾಲಾ ಹಿತೈಷಿಗಳು ಉದ್ಯಮಿಗಳಾದ ಒಲ್ವಿನ್ ರೋಡ್ರಿಗ್ರಸ್ ಮಾತಾನಾಡಿ ಶತಮಾನೋತ್ಸವದಲ್ಲಿ ಭಾಗವಹಿಸಿ ಪ್ರತಿಯೊಬ್ಬರೂ ಸೇರಿ ಕೊಳ್ಳಬೇಕು ಮುಖ್ಯವಾಗಿ ಆರ್ಥಿಕ ವ್ಯವಸ್ಥೆಯ ಕಾರ್ಯ ಬಹುದೊಡ್ಡದು ಎಂದರು.
ಅತಿಥಿಗಳು ಸಂಧರ್ಬೋಚಿತವಾಗಿ ಮಾತಾನಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸೋಮಪ್ಪ ಪೂಜಾರಿ ಓಜಾಲ, ಎಸ್ ಡಿ ಎಂ ಸಿ ಅಧ್ಯಕ್ಷರಾದ ದಿನೇಶ್ ಗೌಡ ಗೋಮುಖ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸತೀಶ್ ನಾಯಕ್, ನಿವೃತ್ತ ಮುಖ್ಯೋಪಾಧ್ಯಾಯರಾದ ರಂಜನಿ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು.