ಪುತ್ತೂರು : ಮುಂಡೂರು ಗ್ರಾಮ ಪಂಚಾಯಿತಿ ಒಳಪಟ್ಟ ಕೆಮ್ಮಿಂಜೆ ಗ್ರಾಮದ ಕಲ್ಲಗುಡ್ಡೆ ಯಲ್ಲಿ ನಾಳೆ ಬೆಳಿಗ್ಗೆ 10:00ಗೆ ಪುತ್ತೂರಿನ ಜನಪ್ರಿಯ ಶಾಸಕರಾದ ಅಶೋಕ್ ಕುಮಾರ್ ರೈ ರವರು ತಾಲೂಕು ಕ್ರೀಡಾಂಗಣದ ಗುದ್ದಲಿ ಪೂಜೆಯನ್ನು ನೆರವೇರಿಸಲಿದ್ದಾರೆ. ಪ್ರಥಮ ಹಂತದ ಕಾಮಗಾರಿ ಪ್ರಾರಂಭವಾಗುತ್ತದೆ ಈ ಕಾರ್ಯಕ್ರಮದಲ್ಲಿ ಅಧಿಕಾರಿಗಳು ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ.
























