• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಕ್ರಾಂತಿಕಾರಿ ಉಬಾರ್ ಮಂಜ ಬೈದ್ಯರ 190ನೇ ವರ್ಷದ ಸಂಸ್ಮರಣೆ : ದೇಶಪ್ರೇಮ ಭರಿತ ಹೋರಾಟ 190 ವರ್ಷಗಳ ಬಳಿಕ ಮುನ್ನಲೆಗೆ

ಕ್ರಾಂತಿಕಾರಿ ಉಬಾರ್ ಮಂಜ ಬೈದ್ಯರ 190ನೇ ವರ್ಷದ ಸಂಸ್ಮರಣೆ : ದೇಶಪ್ರೇಮ ಭರಿತ ಹೋರಾಟ 190 ವರ್ಷಗಳ ಬಳಿಕ ಮುನ್ನಲೆಗೆ

May 28, 2026
ಮಾನವ ತಲೆ ಬುರುಡೆ ಪ್ರಕರಣ- ಎಸ್.ಐ.ಟಿ.ಯ ಅಂತಿಮ ವರದಿಗೆ ಸಂಬಂಧಿಸಿ ಬೆಳ್ತಂಗಡಿ ನ್ಯಾಯಲಯದಲ್ಲಿ ವಾದ ಮಂಡನೆ

ಮಾನವ ತಲೆ ಬುರುಡೆ ಪ್ರಕರಣ- ಎಸ್.ಐ.ಟಿ.ಯ ಅಂತಿಮ ವರದಿಗೆ ಸಂಬಂಧಿಸಿ ಬೆಳ್ತಂಗಡಿ ನ್ಯಾಯಲಯದಲ್ಲಿ ವಾದ ಮಂಡನೆ

August 29, 2026
ಪುತ್ತೂರು ಉಪ್ಪಿನಂಗಡಿ ರಸ್ತೆ ಡೇಂಜರ್ ಸ್ಪಾಟ್ “ ಕಾಪು “- ಸ್ಪೀಡ್ ಹೋದ್ರೆ ಪಲ್ಟಿ ಆಗೋದು ಗ್ಯಾರಂಟಿ.!

ಪುತ್ತೂರು ಉಪ್ಪಿನಂಗಡಿ ರಸ್ತೆ ಡೇಂಜರ್ ಸ್ಪಾಟ್ “ ಕಾಪು “- ಸ್ಪೀಡ್ ಹೋದ್ರೆ ಪಲ್ಟಿ ಆಗೋದು ಗ್ಯಾರಂಟಿ.!

August 29, 2026
ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಬೆಳ್ತಂಗಡಿ ವಲಯದ ವತಿಯಿಂದ ಶಾಸಕ ಹರೀಶ್ ಪೂಂಜಾರಿಗೆ ಗೌರವಾರ್ಪಣೆ

ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಬೆಳ್ತಂಗಡಿ ವಲಯದ ವತಿಯಿಂದ ಶಾಸಕ ಹರೀಶ್ ಪೂಂಜಾರಿಗೆ ಗೌರವಾರ್ಪಣೆ

August 29, 2026
ಪುತ್ತೂರು: ಕೆಮ್ಮಿಂಜೆ ಕಲ್ಲಗುಡ್ಡೆಯಲ್ಲಿ ತಾಲೂಕು ಕ್ರೀಡಾಂಗಣ ಗುದ್ದಲಿ ಪೂಜೆ ಪ್ರಥಮ ಹಂತದ ಕಾಮಗಾರಿ ಪ್ರಾರಂಭ

ಪುತ್ತೂರು: ಕೆಮ್ಮಿಂಜೆ ಕಲ್ಲಗುಡ್ಡೆಯಲ್ಲಿ ತಾಲೂಕು ಕ್ರೀಡಾಂಗಣ ಗುದ್ದಲಿ ಪೂಜೆ ಪ್ರಥಮ ಹಂತದ ಕಾಮಗಾರಿ ಪ್ರಾರಂಭ

August 28, 2026
ಆ.29-31: ಬಡಕೋಡಿ ಕಲ್ಲಮ ಶ್ರೀ ಗುರುರಾಘವೇಂದ್ರ ಮಠದಲ್ಲಿ 355ನೇ ಆರಾಧನಾ ಮಹೋತ್ಸವ

ಆ.29-31: ಬಡಕೋಡಿ ಕಲ್ಲಮ ಶ್ರೀ ಗುರುರಾಘವೇಂದ್ರ ಮಠದಲ್ಲಿ 355ನೇ ಆರಾಧನಾ ಮಹೋತ್ಸವ

August 28, 2026
ಸ್ಯಾಕ್ಸೋಫೋನ್ ಕಲಾವಿದ ವಿಶ್ವನಾಥ್ ಶೇರಿಗಾರ್ ಪುತ್ತೂರು ನಿಧನ

ಸ್ಯಾಕ್ಸೋಫೋನ್ ಕಲಾವಿದ ವಿಶ್ವನಾಥ್ ಶೇರಿಗಾರ್ ಪುತ್ತೂರು ನಿಧನ

August 28, 2026
ಪುತೂರು ತಾಲೂಕು ಕಚೇರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ

ಪುತೂರು ತಾಲೂಕು ಕಚೇರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ

August 28, 2026
ದರ್ಬೆ ಗಲಾಟೆ: ಇದನ್ನು ರಾಜಕೀಯ ಮಾಡ್ತಿದ್ದಾರೆ ಬಿಜೆಪಿ, ಕಾಂಗ್ರೆಸ್, ಹಾಗೆಲ್ಲ ಇದನ್ನು ಮುಂದುವರಿಸಲಿಕ್ಕೆ ನಮಗೆ ಇಷ್ಟವಿಲ್ಲ – ಮಂಗಳೂರಿನಲ್ಲಿ ಮುಬಾಶಿರ ಹೇಳಿಕೆ

ದರ್ಬೆ ಗಲಾಟೆ: ಇದನ್ನು ರಾಜಕೀಯ ಮಾಡ್ತಿದ್ದಾರೆ ಬಿಜೆಪಿ, ಕಾಂಗ್ರೆಸ್, ಹಾಗೆಲ್ಲ ಇದನ್ನು ಮುಂದುವರಿಸಲಿಕ್ಕೆ ನಮಗೆ ಇಷ್ಟವಿಲ್ಲ – ಮಂಗಳೂರಿನಲ್ಲಿ ಮುಬಾಶಿರ ಹೇಳಿಕೆ

August 28, 2026
ತುಳುವಿಗೆ ಅಧಿಕೃತ ಭಾಷೆ ಸ್ಥಾನಮಾನ? – ಸಿಎಂಗೆ ಪುತ್ತೂರು ಶಾಸಕ ಅಶೋಕ್ ರೈ ಮನವಿ

ತುಳುವಿಗೆ ಅಧಿಕೃತ ಭಾಷೆ ಸ್ಥಾನಮಾನ? – ಸಿಎಂಗೆ ಪುತ್ತೂರು ಶಾಸಕ ಅಶೋಕ್ ರೈ ಮನವಿ

August 28, 2026
ಪುತ್ತೂರು : ದರ್ಬೆ ಗಲಾಟೆ ಪ್ರಕರಣದಲ್ಲಿ ಹಿಂಜಾವೇ ಮುಖಂಡ ದಿನೇಶ್ ಪಂಜಿಗ ವಿರುದ್ಧ ಬಲವಂತದ ಕ್ರಮ ಬೇಡ! ಹೈಕೋರ್ಟ್ ಮಹತ್ವದ ಆದೇಶ

ಪುತ್ತೂರು : ದರ್ಬೆ ಗಲಾಟೆ ಪ್ರಕರಣದಲ್ಲಿ ಹಿಂಜಾವೇ ಮುಖಂಡ ದಿನೇಶ್ ಪಂಜಿಗ ವಿರುದ್ಧ ಬಲವಂತದ ಕ್ರಮ ಬೇಡ! ಹೈಕೋರ್ಟ್ ಮಹತ್ವದ ಆದೇಶ

August 28, 2026
ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆಗಳನ್ನು ತರಲು ಮಹತ್ವದ ಹೆಜ್ಜೆ ಇಟ್ಟ ಸರ್ಕಾರ -ಯು.ಟಿ. ಖಾದರ್​​ಗೆ ಮತ್ತೊಂದು ದೊಡ್ಡ ಜವಾಬ್ದಾರಿ

ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆಗಳನ್ನು ತರಲು ಮಹತ್ವದ ಹೆಜ್ಜೆ ಇಟ್ಟ ಸರ್ಕಾರ -ಯು.ಟಿ. ಖಾದರ್​​ಗೆ ಮತ್ತೊಂದು ದೊಡ್ಡ ಜವಾಬ್ದಾರಿ

August 27, 2026
ಪುತ್ತೂರು : ಆಟೋ ರಿಕ್ಷಾದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

ಪುತ್ತೂರು : ಆಟೋ ರಿಕ್ಷಾದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

August 27, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Sunday, August 30, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಮಾನವ ತಲೆ ಬುರುಡೆ ಪ್ರಕರಣ- ಎಸ್.ಐ.ಟಿ.ಯ ಅಂತಿಮ ವರದಿಗೆ ಸಂಬಂಧಿಸಿ ಬೆಳ್ತಂಗಡಿ ನ್ಯಾಯಲಯದಲ್ಲಿ ವಾದ ಮಂಡನೆ

    ಮಾನವ ತಲೆ ಬುರುಡೆ ಪ್ರಕರಣ- ಎಸ್.ಐ.ಟಿ.ಯ ಅಂತಿಮ ವರದಿಗೆ ಸಂಬಂಧಿಸಿ ಬೆಳ್ತಂಗಡಿ ನ್ಯಾಯಲಯದಲ್ಲಿ ವಾದ ಮಂಡನೆ

    ಪುತ್ತೂರು ಉಪ್ಪಿನಂಗಡಿ ರಸ್ತೆ ಡೇಂಜರ್ ಸ್ಪಾಟ್ “ ಕಾಪು “- ಸ್ಪೀಡ್ ಹೋದ್ರೆ ಪಲ್ಟಿ ಆಗೋದು ಗ್ಯಾರಂಟಿ.!

    ಪುತ್ತೂರು ಉಪ್ಪಿನಂಗಡಿ ರಸ್ತೆ ಡೇಂಜರ್ ಸ್ಪಾಟ್ “ ಕಾಪು “- ಸ್ಪೀಡ್ ಹೋದ್ರೆ ಪಲ್ಟಿ ಆಗೋದು ಗ್ಯಾರಂಟಿ.!

    ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಬೆಳ್ತಂಗಡಿ ವಲಯದ ವತಿಯಿಂದ ಶಾಸಕ ಹರೀಶ್ ಪೂಂಜಾರಿಗೆ ಗೌರವಾರ್ಪಣೆ

    ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಬೆಳ್ತಂಗಡಿ ವಲಯದ ವತಿಯಿಂದ ಶಾಸಕ ಹರೀಶ್ ಪೂಂಜಾರಿಗೆ ಗೌರವಾರ್ಪಣೆ

    ಪುತ್ತೂರು: ಕೆಮ್ಮಿಂಜೆ ಕಲ್ಲಗುಡ್ಡೆಯಲ್ಲಿ ತಾಲೂಕು ಕ್ರೀಡಾಂಗಣ ಗುದ್ದಲಿ ಪೂಜೆ ಪ್ರಥಮ ಹಂತದ ಕಾಮಗಾರಿ ಪ್ರಾರಂಭ

    ಪುತ್ತೂರು: ಕೆಮ್ಮಿಂಜೆ ಕಲ್ಲಗುಡ್ಡೆಯಲ್ಲಿ ತಾಲೂಕು ಕ್ರೀಡಾಂಗಣ ಗುದ್ದಲಿ ಪೂಜೆ ಪ್ರಥಮ ಹಂತದ ಕಾಮಗಾರಿ ಪ್ರಾರಂಭ

    ಆ.29-31: ಬಡಕೋಡಿ ಕಲ್ಲಮ ಶ್ರೀ ಗುರುರಾಘವೇಂದ್ರ ಮಠದಲ್ಲಿ 355ನೇ ಆರಾಧನಾ ಮಹೋತ್ಸವ

    ಆ.29-31: ಬಡಕೋಡಿ ಕಲ್ಲಮ ಶ್ರೀ ಗುರುರಾಘವೇಂದ್ರ ಮಠದಲ್ಲಿ 355ನೇ ಆರಾಧನಾ ಮಹೋತ್ಸವ

    ಸ್ಯಾಕ್ಸೋಫೋನ್ ಕಲಾವಿದ ವಿಶ್ವನಾಥ್ ಶೇರಿಗಾರ್ ಪುತ್ತೂರು ನಿಧನ

    ಸ್ಯಾಕ್ಸೋಫೋನ್ ಕಲಾವಿದ ವಿಶ್ವನಾಥ್ ಶೇರಿಗಾರ್ ಪುತ್ತೂರು ನಿಧನ

    ಪುತೂರು ತಾಲೂಕು ಕಚೇರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ

    ಪುತೂರು ತಾಲೂಕು ಕಚೇರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ

    ದರ್ಬೆ ಗಲಾಟೆ: ಇದನ್ನು ರಾಜಕೀಯ ಮಾಡ್ತಿದ್ದಾರೆ ಬಿಜೆಪಿ, ಕಾಂಗ್ರೆಸ್, ಹಾಗೆಲ್ಲ ಇದನ್ನು ಮುಂದುವರಿಸಲಿಕ್ಕೆ ನಮಗೆ ಇಷ್ಟವಿಲ್ಲ – ಮಂಗಳೂರಿನಲ್ಲಿ ಮುಬಾಶಿರ ಹೇಳಿಕೆ

    ದರ್ಬೆ ಗಲಾಟೆ: ಇದನ್ನು ರಾಜಕೀಯ ಮಾಡ್ತಿದ್ದಾರೆ ಬಿಜೆಪಿ, ಕಾಂಗ್ರೆಸ್, ಹಾಗೆಲ್ಲ ಇದನ್ನು ಮುಂದುವರಿಸಲಿಕ್ಕೆ ನಮಗೆ ಇಷ್ಟವಿಲ್ಲ – ಮಂಗಳೂರಿನಲ್ಲಿ ಮುಬಾಶಿರ ಹೇಳಿಕೆ

    ತುಳುವಿಗೆ ಅಧಿಕೃತ ಭಾಷೆ ಸ್ಥಾನಮಾನ? – ಸಿಎಂಗೆ ಪುತ್ತೂರು ಶಾಸಕ ಅಶೋಕ್ ರೈ ಮನವಿ

    ತುಳುವಿಗೆ ಅಧಿಕೃತ ಭಾಷೆ ಸ್ಥಾನಮಾನ? – ಸಿಎಂಗೆ ಪುತ್ತೂರು ಶಾಸಕ ಅಶೋಕ್ ರೈ ಮನವಿ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಪ್ರಾದೇಶಿಕ ಉಪ್ಪಿನಂಗಡಿ

ಕ್ರಾಂತಿಕಾರಿ ಉಬಾರ್ ಮಂಜ ಬೈದ್ಯರ 190ನೇ ವರ್ಷದ ಸಂಸ್ಮರಣೆ : ದೇಶಪ್ರೇಮ ಭರಿತ ಹೋರಾಟ 190 ವರ್ಷಗಳ ಬಳಿಕ ಮುನ್ನಲೆಗೆ

by ಪ್ರಜಾಧ್ವನಿ ನ್ಯೂಸ್
May 28, 2026
in ಉಪ್ಪಿನಂಗಡಿ, ಧಾರ್ಮಿಕ, ಪುತ್ತೂರು, ಪ್ರಾದೇಶಿಕ
0
ಕ್ರಾಂತಿಕಾರಿ ಉಬಾರ್ ಮಂಜ ಬೈದ್ಯರ 190ನೇ ವರ್ಷದ ಸಂಸ್ಮರಣೆ : ದೇಶಪ್ರೇಮ ಭರಿತ ಹೋರಾಟ 190 ವರ್ಷಗಳ ಬಳಿಕ ಮುನ್ನಲೆಗೆ
17
SHARES
48
VIEWS
ShareShareShare

ಉಪ್ಪಿನಂಗಡಿ: ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದೇ ದಾಖಲಾಗಿದ್ದ 1857 ರ ಹೋರಾಟಕ್ಕಿಂತ 20 ವರ್ಷ ಮೊದಲೇ ಅಂದರೆ 1837 ರಲ್ಲಿ ಬ್ರಿಟೀಷರ ವಿರುದ್ದ ಹೋರಾಟ ನಡೆಸಿ ಹುತಾತ್ಮರಾದ ಉಪ್ಪಿನಂಗಡಿಯ ಮಂಜ ಬೈದ್ಯ ರವರ ದೇಶಪ್ರೇಮ ಭರಿತ ಹೋರಾಟ 190 ವರ್ಷಗಳ ಬಳಿಕ ಮುನ್ನಲೆಗೆ ಬರುವಂತಾಗಿರುವುದು ವಿಶೇಷ. ಆದರೂ ಅವರ ಹೆಸರನ್ನು ಶಾಶ್ವತಗೊಳಿಸುವ ಕಾರ್ಯದತ್ತ ಚಿತ್ತವಿರಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವೆಂದು ಸಂಸದ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಉಪ್ಪಿನಂಗಡಿಯ ನೇತ್ರಾವತಿ ಸಭಾ ಭವನದಲ್ಲಿ ಮೇ.27ರಂದು ಕ್ರಾಂತಿವೀರ ಮಂಜ ಬೈದ್ಯ ಸಂಸ್ಮರಣಾ ಸಮಿತಿ ಮತ್ತು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಬೆಳ್ತಂಗಡಿ ಇವುಗಳ ಆಶ್ರಯದಲ್ಲಿ ನಡೆದ ಕ್ರಾಂತಿವೀರ ಮಂಜ ಬೈದ್ಯ ಸಂಸ್ಮರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಹಿರಿಯರು ಮಾಡಿದ ತ್ಯಾಗ ಬಲಿದಾನಗಳನ್ನು ನೆನಪಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದ್ದು, ಮಂಜ ಬೈದ್ಯರ ಸಂಸ್ಮರಣೆ ಮಾಡುವ ಈ ದಿನ ನಮ್ಮೆಲ್ಲರ ಬದುಕಿನ ಸಾರ್ಥಕ್ಯ ಕ್ಷಣವಾಗಿದೆ. ಮಂಜ ಬೈದ್ಯರ ನೆನಪನ್ನು ಈ ಸಮಾಜದಲ್ಲಿ ಶಾಶ್ವತವಾಗಿ ಅಮರವಾಗಿಸಲು ಸರಕಾರದ ನೆಲೆಯಲ್ಲಿ ಏನು ಮಾಡಬಹುದೆಂದು ನಾನು ಹಾಗೂ ಮಂಗಳೂರು ಸಂಸದರಾದ ಬ್ರಿಜೇಶ್ ಚೌಟರು ಚರ್ಚಿಸಿ ಅದಕ್ಕೆ ಪೂರಕವಾದ ಕೆಲಸವನ್ನು ಮಾಡುತ್ತೇವೆ ಎಂದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮಾತನಾಡಿ, ಬ್ರಿಟೀಷರ ದೌರ್ಜನ್ಯದ ವಿರುದ್ಧ ಸಿಡಿದೆದ್ದ ಮಂಜ ಬೈದ್ಯರವರು ಅಪ್ರತಿಮ ಕ್ರಾಂತಿವೀರ. ನಮ್ಮ ಸಮಾಜದವರನ್ನು ಬ್ರಿಟೀಷರ ಕಪಿ ಮುಷ್ಠಿಯಿಂದ ಪಾರು ಮಾಡಬೇಕೆಂದು ಕನಸು ಕಂಡಿದ್ದ ಅವರು ಅದಕ್ಕಾಗಿ ಪ್ರಾಣ ತ್ಯಾಗ ಮಾಡಬೇಕಾಗಿ ಬಂದಿತ್ತು. ಅವರ ನೆನಪು ಅಜಾರಾಮರ ಆಗಿ ಉಳಿಯಬೇಕು. ಮಂಜ ಬೈದ್ಯ ಸಂಸ್ಮರಣಾ ಸಮಿತಿಯವರು ಈಗಾಗಲೇ ಇದಕ್ಕಾಗಿ ಹಲವಾರು ಬೇಡಿಕೆಗಳನ್ನು ಮುಂದಿರಿಸಿದ್ದು, ತನ್ನ ಕ್ಷೇತ್ರವಾದ ಕಲ್ಲೇರಿಯಲ್ಲಿ ವೃತ್ತ ರಚಿಸಿ ಅದಕ್ಕೆ ಮಂಜು ಬೈದ್ಯರ ನಾಮಕರಣ ಮಾಡಬೇಕೆನ್ನುವ ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ಶಾಸಕನ ನೆಲೆಯಲ್ಲಿ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ. ಬೆಳ್ತಂಗಡಿ ತಾಲೂಕಿನಲ್ಲಿ ಸರಕಾರಿ ಕಟ್ಟಡವೊಂದಕ್ಕೆ ಮಂಜು ಬೈದ್ಯರ ಹೆಸರಿಡುವ ಕಾರ್ಯಕ್ಕೆ ನಿಮ್ಮೆಲ್ಲರ ಸಲಹೆ ಪಡೆದು ಮುಂದುವರಿಯುತ್ತೇನೆ. ಇದರೊಂದಿಗೆ ಅವರ ಮೂಲ ಮನೆಯ ಬಳಿಯು ಸ್ಮಾರಕ ನಿರ್ಮಾಣ ಮಾಡುವ ಬಗ್ಗೆ ಹಾಗೂ ಅವರ ತತ್ತ್ವಾದರ್ಶಗಳನ್ನು ಉಳಿಸುವ ಕಾರ್ಯವಾಗಬೇಕಿದೆ. ಇದಕ್ಕೂ ನಾನು ನನ್ನಿಂದಾದ ಸಹಕಾರ ನೀಡುತ್ತೇನೆ ಎಂದರು.

ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ನಮ್ಮ ಹಿರಿಯರು ಮಾಡಿದ ತ್ಯಾಗ- ಬಲಿದಾನಗಳಿಂದ ನಾವಿಂದು ಸ್ವಾತಂತ್ರ್ಯದ ಸವಿ ಅನುಭವಿಸುವಂತಾಗಿದೆ. ಮಂಜ ಬೈದ್ಯರು ಸೇರಿದಂತೆ ಇಂತಹ ಕ್ರಾಂತಿಕಾರಿ ಹೋರಾಟಗಾರರಂತೆ ಅಂದು ಇಡೀ ದೇಶವೇ ಒಂದಾಗುತ್ತಿದ್ದರೆ ಬ್ರಿಟೀಷರು ನಮ್ಮನ್ನು ಆಳ್ವಿಕೆ ಮಾಡಲು ಸಾಧ್ಯವಿರುತ್ತಿರಲಿಲ್ಲ. ಮಂಜ ಬೈದ್ಯರ ಬಲಿದಾನ ಮುನ್ನಲೆಗೆ ಬರಲು 190 ವರ್ಷಗಳು ಬೇಕಾಯಿತು. ಆದರೂ ಅವರ ತ್ಯಾಗ- ಬಲಿದಾನಗಳನ್ನು ಶಾಶ್ವತವಾಗಿ ನೆನಪಿಸುವ ಸಲುವಾಗಿ ಹಲವು ಯೋಜನೆಗಳು ಅನುಷ್ಠಾನವಾಗಬೇಕಿದೆ. ಇದಕ್ಕಾಗಿ ನಾವೆಲ್ಲರೂ ಒಂದಾಗಿ ಕೆಲಸ ಮಾಡೋಣ ಎಂದರು.

ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಮಂಜು ಬೈದ್ಯರಂತಹ ರೈತನ ಮಗನೋರ್ವನ ಹೋರಾಟ ಇತಿಹಾಸ ಪುಟಗಳಲ್ಲಿ ದಾಖಲಾಗದಂತಹ ಹುನ್ನಾರ ಅಂದು ನಡೆದಿರಬಹುದು. ಅವರ ಹೋರಾಟ ದಂಗೆ ಅಲ್ಲ. ಅದು ಸ್ವಾಭಿಮಾನದ ಹೋರಾಟ. ಯುವಕರಲ್ಲಿನ ದೇಶಾಭಿಮಾನದಿಂದಾಗಿ ಅವರ ಅಂದಿನ ಹೋರಾಟ ಇಂದು ಮುನ್ನಲೆಗೆ ಬಂದಿದೆ. ಸುಳ್ಳು ಇತಿಹಾಸವನ್ನು ತಿರುಚಿ ನೈಜ ಇತಿಹಾಸವನ್ನು ದಾಖಲಿಸುವ ಕೆಲಸ ನಮ್ಮೆಲ್ಲರಿಂದಾಗಬೇಕು. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ, ದ.ಕ. ಜಿಲ್ಲಾಧಿಕಾರಿ ಕಚೇರಿಗೆ ಮಂಜ ಬೈದ್ಯರ ಹೆಸರಿಡುವ ಕೆಲಸವಾಗಬೇಕು. ಈ ಮೂಲಕ ಅಂದಿನ ರೈತ ಹೋರಾಟದ ನೆನಪನ್ನು ಅಜಾರಾಮರವಾಗಿಸುವ ಕೆಲಸವಾಗಬೇಕು ಎಂದರು.

ಪತ್ರಕರ್ತ ಉದಯಕುಮಾರ್ ಮಂಜ ಬೈದ್ಯರ ಬಗ್ಗೆ ಅಧ್ಯಯನ ವರದಿ ಮಂಡಿಸಿದರು. ವೈದ್ಯ ಡಾ. ಸುಪ್ರೀತ್ ಲೋಬೋ, ಪುತ್ತೂರು ತಾಲೂಕು ಅಕ್ರಮ- ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಅಝೀಝ್ ಬಸ್ತಿಕ್ಕಾರ್ ಮಾತನಾಡಿ, 1837ರಲ್ಲಿ ಅಂದಿನ ತಾಲೂಕು ಕೇಂದ್ರವಾಗಿದ್ದ ಉಪ್ಪಿನಂಗಡಿಯ ಖಜಾನೆಯಲ್ಲಿ ಗುಮಾಸ್ತರಾಗಿದ್ದ ಮಂಜ ಬೈದ್ಯ ಬ್ರಿಟೀಷ್ ಕಂಪೆನಿ ಸರಕಾರದ ಅಮಾನುಷ ನಡೆಗಳನ್ನು ಸಹಿಸಲಾರದೆ, ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಖಜಾನೆಯ ಅಧಿಕಾರಿಗಳನ್ನು ಕಟ್ಟಿ ಹಾಕಿ ಖಜಾನೆಯಲ್ಲಿನ ಧನಕನಕಗಳನ್ನು ಬಾಚಿಕೊಂಡು ಆ ವೇಳೆ ಬ್ರಿಟೀಷರ ವಿರುದ್ದ ಹೋರಾಟ ನಡೆಸುತ್ತಿದ್ದ ಕಲ್ಯಾಣಸ್ವಾಮಿಗೆ ನೀಡಿ 13 ದಿನಗಳ ಕಾಲ ತುಳುನಾಡನ್ನು ಬ್ರಿಟೀಷರಿಂದ ಮುಕ್ತಗೊಳಿಸಿರುವುದು ಇತಿಹಾಸ. ಬಳಿಕ ಬ್ರಿಟೀಷರಿಗೆ ಸೆರೆ ಸಿಕ್ಕಿ 1837 ಮೇ 27 ರಂದು ಮಂಗಳೂರಿನ ಬಿಕರ್ಣಕಟ್ಟೆಯಲ್ಲಿ ನೇಣುಗಂಬವನ್ನೇರುವ ಮೂಲಕ ತಾಯ್ನಾಡ ದಾಸ್ಯ ಮುಕ್ತಿಗಾಗಿ ಬಲಿದಾನಗೈದ ಮಂಜು ಬೈದ್ಯರ ಹೋರಾಟ ಇತಿಹಾಸದಲ್ಲಿ ಪುಟದಲ್ಲಿ ಮರೆಯಾಗಿದ್ದ ಬಗ್ಗೆ ಹಾಗೂ ಮತ್ತೆ 190 ವರ್ಷಗಳ ಬಳಿಕ ಅವರ ತ್ಯಾಗ ಮುನ್ನಲೆಗೆ ಬಂದ ಬಗ್ಗೆ ವಿಚಾರ ಮಂಡಿಸಿದರು.

ವಂದೇ ಮಾತರಂ ಹಾಡಿನೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾಯ್ಕ್ ಗಣ್ಯರ ಸಮ್ಮುಖದಲ್ಲಿ ದೀಪ ಬೆಳಗಿಸಿ, ಮಂಜ ಬೈದ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಚಾಲನೆ ನೀಡಿದರು. ‌

ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ 20 ವರ್ಷಗಳ ಮೊದಲೇ ಬ್ರಿಟಿಷರ ವಿರುದ್ಧ ನಡೆಸಿದ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟದಲ್ಲಿ ಕೆದಂಬಾಡಿ ರಾಮಯ್ಯ ಗೌಡರೊಂದಿಗೆ ಹೋರಾಡಿ ಮರೆಯಾದ ನಮ್ಮೂರಿನ ಮಾಣಿಕ್ಯ ಮಂಜ ಬೈದ್ಯರನ್ನು ಕೊನೆಗೂ
ಮುನ್ನಲೆಗೆ ತರುವ ಕೆಲಸವಾಗಿದೆ

ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ದಡ್ಡು, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪುತ್ತೂರು ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಬಿಎಸ್ಸೆಫ್‌ನ ನಿವೃತ ಕಮಾಂಡೇಂಟ್ ಚಂದಪ್ಪ ಮೂಲ್ಯ, ಪ್ರಮುಖರಾದ ಪದ್ಮರಾಜ್ ಆರ್. ಪೂಜಾರಿ, ಜಯವಿಕ್ರಮ್ ಕಲ್ಲಾಪು, ಕೃಷ್ಣರಾವ್ ಆರ್ತಿಲ, ಆರ್.ಸಿ. ನಾರಾಯಣ, ಕರುಣಾಕರ ಸುವರ್ಣ, ರಾಮಚಂದ್ರ ಪೂಜಾರಿ, ಅಜಿತ್ ಕುಮಾರ್ ಪಾಲೇರಿ, ಮುರಳೀಧರ್ ರೈ ಮಠಂತಬೆಟ್ಟು, ಅಪ್ಪಯ್ಯ ಮಣಿಯಾಣಿ, ಶಯನಾ ಜಯಾನಂದ, ರಾಮಚಂದ್ರ ಮಣಿಯಾಣಿ,

Muliya

ಜಾಹೀರಾತು

8722552464 Astrloger

ಜಾಹೀರಾತು

ಪ್ರಸನ್ನ ದರ್ಬೆ, ಶೇಖರ ಗೌಂಡತ್ತಿಗೆ, ಪ್ರಸಾದ್ ಕೌಶಲ್ ಶೆಟ್ಟಿ, ವಿದ್ಯಾಧರ ಜೈನ್, ಸುಧಾಕರ ಶೆಟ್ಟಿ, ಮುಕುಂದ ಬಜತ್ತೂರು, ಎನ್. ಉಮೇಶ್ ಶೆಣೈ ವರದರಾಜ್, ಪ್ರಕಾಶ್ ರೈ ಬೆಳ್ಳಿಪ್ಪಾಡಿ, ಹರಿರಾಮಚಂದ್ರ, ಸಂಜೀವ ಪೂಜಾರಿ, ಎಲ್ಯಣ್ಣ ಪೂಜಾರಿ, ಸಾಜ ರಾಧಾಕೃಷ್ಣ ಆಳ್ವ, ಯು.ಜಿ. ರಾಧಾ, ಪುರುಷೋತ್ತಮ ಮುಂಗ್ಲಿಮನೆ, ದಿನೇಶ್ ರೈ, ಜಯಪ್ರಕಾಶ್ ಬದಿನಾರು, ಡಾ. ರಮ್ಯ ರಾಜಾರಾಮ್ , ವಂದನಾ ಶರತ್ , ಉಷಾ ಮುಳಿಯ, ಕೈಲಾರು ರಾಜಗೋಪಾಲ ಭಟ್, ಗಂಗಾಧರ ಗೌಡ ನೆಕ್ಕರಾಜೆ, ಅನಿಲ್ ದಡ್ಡು, ಜಯಾನಂದ ಕಲ್ಲಾಪು, ಸುನಿಲ್ ಅನಾವು, ಯು. ರಾಮ, ಸುಂದರ ಶೆಟ್ಟಿ ಎಂಜಿರಪಳಿಕೆ ಹಾಗೂ ಮಂಜ ಬೈದ್ಯರ ವಂಶಸ್ಥರಾದ ಜನಾರ್ದನ, ವಿಮಲಾ ತೇಜಾಕ್ಷಿ, ವೆಂಕಪ್ಪ ಪೂಜಾರಿ ಮರುವೇಲು, ವಸಂತ ಕುಕ್ಕುಜೆ ಮತ್ತಿತರರು ಉಪಸ್ಥಿತರಿದ್ದರು.

ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿನ ಶ್ರೀರಾಮ ಶಾಲೆಯಲ್ಲಿ ಹೊಸದಾಗಿ ನಿರ್ಮಿಸಲಾದ ಕ್ರೀಡಾಂಗಣಕ್ಕೆ ಉಪ್ಪಿನಂಗಡಿಯ ಹುತಾತ್ಮ ಸ್ವಾತಂತ್ರ್ಯ ಹೋರಾಟಗಾರ ಮಂಜ ಬೈದ್ಯರ ಹೆಸರನ್ನು ಇಡುವ ಬಗ್ಗೆ ಶಾಲಾ ಆಡಳಿತವು ನಿರ್ಣಯವನ್ನು ಕೈಗೊಂಡಿರುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದಾಗ ಕರತಾಂಡನದ ಬೆಂಬಲ ವ್ಯಕ್ತವಾಯಿತು.

SendShare7Share
Previous Post

ನೂತನ ಸಿಎಂ ಆಗಿ ಡಿ.ಕೆ. ಶಿವಕುಮಾರ್​​ ಆಯ್ಕೆ ಬಹುತೇಕ ಖಚಿತ – ಕೆಪಿಸಿಸಿಗೂ ಹೊಸ ಸಾರಥಿ

Next Post

ಮಧ್ಯಾಹ್ನ 3 ಗಂಟೆಗೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ! – “ಅಂದು, ಇಂದು, ಎಂದೆಂದಿಗೂ ಒಗ್ಗಟ್ಟೇ ನಮ್ಮ ಶಕ್ತಿ. ಜನಸೇವೆಯೇ ನಮ್ಮ ಬದ್ಧತೆ” ಎಂದು ಕಾಂಗ್ರೆಸ್ ಟ್ವೀಟ್

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ಮಧ್ಯಾಹ್ನ 3 ಗಂಟೆಗೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ! – “ಅಂದು, ಇಂದು, ಎಂದೆಂದಿಗೂ ಒಗ್ಗಟ್ಟೇ ನಮ್ಮ ಶಕ್ತಿ. ಜನಸೇವೆಯೇ ನಮ್ಮ ಬದ್ಧತೆ” ಎಂದು ಕಾಂಗ್ರೆಸ್ ಟ್ವೀಟ್

ಮಧ್ಯಾಹ್ನ 3 ಗಂಟೆಗೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ! - “ಅಂದು, ಇಂದು, ಎಂದೆಂದಿಗೂ ಒಗ್ಗಟ್ಟೇ ನಮ್ಮ ಶಕ್ತಿ. ಜನಸೇವೆಯೇ ನಮ್ಮ ಬದ್ಧತೆ” ಎಂದು ಕಾಂಗ್ರೆಸ್ ಟ್ವೀಟ್

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..